ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಹಣಕಾಸು ವಿಧೇಯಕಕ್ಕೆ ಅನುಮೋದನೆ ಪಡೆದುಕೊಳ್ಳಲು, ಬಹುಮತ ಸಾಬೀತುಪಡಿಸಲು ಸದನ ನಡೆಸಲು ಹೇಳಿದ್ದಾರೆ. ಹಿಂದಿನ ಸರ್ಕಾರದ ಹಣಕಾಸು ವಿಧೇಯಕಕ್ಕೆ ಜುಲೈ 31 ರೊಳಗೆ ಅನುಮೋದನೆ ಪಡೆಯಬೇಕಿದೆ ಎಂದು ಸಭಾಧ್ಯಕ್ಷ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಎಲ್ಲಾ ಶಾಸಕರಿಗೆ ಸೋಮವಾರ 11 ಗಂಟೆಗೆ ಬರಲು ಸೂಚನೆ ನೀಡಲಾಗಿದೆ. ಸಿಎಂ ವಿಶ್ವಾಸಮತ ಯಾಚನೆ ಮಾಡಲಿದ್ದು, ಕಲಾಪಕ್ಕೆ ಬರುವಂತೆ ಶಾಸಕರಿಗೆ ತಿಳಿಸಲಾಗಿದೆ. ಶನಿವಾರ ಮತ್ತು ಭಾನುವಾರ ಸ್ಪೀಕರ್ ಕಚೇರಿ ಕಾರ್ಯ ನಿರ್ವಹಿಸಿದೆ. ಸೋಮವಾರ ಎಲ್ಲಾ ಸದಸ್ಯರು ಕಲಾಪಕ್ಕೆ ಹಾಜರಾಗಬೇಕಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಅಧಿವೇಶನ ಇರುವುದರಿಂದ ಇಂದೇ ರಾಜೀನಾಮೆ ನೀಡಿದ ಶಾಸಕರ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ನಿಧನಕ್ಕೆ ಸ್ಪೀಕರ್ ರಮೇಶ್ ಕುಮಾರ್ ಸಂತಾಪ ಸೂಚಿಸಿ ಭಾವುಕಾಗಿದ್ದಾರೆ