ತುಳಸಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜಗಳು ಎದೆ ಗೊತ್ತಾ..? ಇಲ್ಲಿದೆ ಮಾಹಿತಿ

Date:

ತುಳಸಿ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜಗಳು ಎದೆ ಗೊತ್ತಾ..? ಇಲ್ಲಿದೆ ಮಾಹಿತಿ

 

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿದ್ದು, ಹಾಗೆಯೇ ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ. ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇಂತಹ ಕೆಲ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಪ್ರತಿದಿನ ಬೆಳಗ್ಗೆ ತುಳಸಿ ಎಲೆಗಳನ್ನು ತಿನ್ನುವುದರಿಂದ ತ್ವಚೆಗೆ ಹೊಳಪು ನೀಡುತ್ತದೆ.
ಬಾಯಿ ದುರ್ವಾಸನೆಯಿಂದ ಬಳಲುತ್ತಿರುವವರು ತುಳಸಿ ಎಲೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ದುರ್ವಾಸನೆ ಕಡೆಮೆ ಆಗುತ್ತದೆ.
ತುಳಸಿ ಎಲೆಯನ್ನು ಚಳಿಗಾಲದಲ್ಲಿ ಅನೇಕ ಪ್ರಯೋಜನಗಳನ್ನು ಹೊಂದಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ತಿನ್ನುವುದರಿಂದ ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ದೂರವಾಗುತ್ತವೆ.
ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು ಬರುವುದಿಲ್ಲ. ಅಸಿಡಿಟಿ, ಮಲಬದ್ಧತೆ, ಅಜೀರ್ಣ ಮತ್ತು ಹುಳಿ ಮುಂತಾದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
ತುಳಸಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಆಂಟಿಫಂಗಲ್ ಇತ್ಯಾದಿ ಗುಣಗಳಿಂದ ಸಮೃದ್ಧವಾಗಿದೆ. ಇವು ಅನೇಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ.
ಹೊಟ್ಟೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಾದ ಎದೆಯುರಿ, ಅಜೀರ್ಣ ಮತ್ತು ಅಸಿಡಿಟಿಯಿಂದ ಚಿಟಿಕೆಯಲ್ಲಿ ಪರಿಹಾರ ನೀಡುತ್ತದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...