ಒಂದೆಡೇ ಬಿಜೆಪಿ ಕಳೆದ ಎರಡು ದಿನಗಳಿಂದ ಜಿಂದಾಲ್ ಕಂಪನಿಗೆ ಭೂಮಿ ನೀಡಿದಕ್ಕೆ ವಿರೋಧಿಸಿ, ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿದೆ. ಈ ಸಂದರ್ಭದಲ್ಲಿಯೇ ಸಚಿವ ಡಿಕೆ ಶಿವಕುಮಾರ್, ಜಿಂದಾಲ್ ಕಂಪನಿ ಬಂಡವಾಳ ಹೂಡಿ ಉದ್ಯೋಗ ಸೃಷ್ಠಿಸುವ ಮೂಲಕ ರಾಜ್ಯಕ್ಕೆ ತೆರಿಗೆ ಕಟ್ಟುತ್ತಿದೆ. ಹೀಗೆ ತೆರಿಗೆ ಕಟ್ಟಿದೋರಿಗೆ ಭೂಮಿಯನ್ನು ಕೊಡುತ್ತಿದ್ದೇವೆ ಎಂದು ಜಿಂದಾಲ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಡಿಕೆ ಶಿವಕುಮಾರ್, ಜಿಂದಾಲ್ ಕಂಪನಿಗೆ ಭೂಮಿಯನ್ನು ಕೊಡುವುದನ್ನು ನಾನಂತೂ ಬೆಂಬಲಿಸುತ್ತೇನೆ. ಏಕೆಂದರೇ ಇಂತಹ ಕಂಪನಿಗಳಿಗೆ ಅವಕಾಶ ನೀಡದಿದ್ದರೇ ಸರ್ಕಾರ ಎಲ್ಲಿಂದ ಉದ್ಯೋಗ ಸೃಷ್ಠಿ ಮಾಡುತ್ತದೆ. ಹೀಗಾಗಿ ನಾನು ಜಿಂದಾಲ್ ಪರ ಇದ್ದೇನೆ. ಬಂಡವಾಳ ಹೂಡೋದು ಕಂಪನಿಗಳು, ಉದ್ಯಮಿಗಳು.
ಅವರು ಜಿಎಸ್ ಟಿ ಕಟ್ಟುತ್ತಾ ಹಾಗೂ ಇತರೆ ನಿಯಗಳನ್ನು ಕೂಡ ಪಾಲಿಸುತ್ತಾರೆ ಎಂದು ಜಿಂದಾಲ್ ಪರವಾಗಿ, ಉದ್ಯಮಿಗಳ ಪರವಾಗಿ ಮಾತನಾಡಿದರು.
ಇದೇ ವೇಳೆ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಈ ಮೊದಲೇ ಪ್ರತಿಭಟನೆ ನಡೆಸಬೇಕಿತ್ತು. ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರಕ್ಕೆ ಫೌಂಡೇಶನ್ ಹಾಕಿದವರೇ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್. ಬೇಕಾದರೇ ದಾಖಲೆಗಳನ್ನು ತಗೆದು ನೋಡಲಿ ಎಂದು ಕಿಡಿಕಾರಿದರು.