ತೆಲಂಗಾಣ ಎಲೆಕ್ಷನ್.. ಕಾರನಲ್ಲಿ ಸಿಕ್ಕಿದೆಷ್ಟು ಕೋಟಿ ಹಣ ಗೊತ್ತಾ..?
ತೆಲಂಗಾಣ ಚುನಾವಣಾ ಕಣ ರಂಗೇರಿದೆ.. ಇನ್ನೇನು ಕೆಲವೆ ದಿನಗಳಲ್ಲಿ ಎಲೆಕ್ಷನ್ ಸಹ ನಡೆಯಲಿದೆ.. ಈ ನಡುವೆ ಹಣದ ಹೊಳೆಯನ್ನ ಹರಿಸುವಲ್ಲಿ ಕೆಲ ನಾಯಕರು ಬ್ಯೂಸಿಯಾದಂತಿದೆ.. ಹೀಗಾಗೆ ಸ್ವಿಫ್ಟ್ ಡಿಸೈರ್ ಕಾರೊಂದನ್ನ ಚೆಕ್ ಮಾಡಲಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 5.8 ಕೋಟಿ ಹಣವನ್ನ ಪೆಂಬರ್ತಿ ಎಸ್ಎಸ್ಟಿ ಚೆಕ್ ಪೋಸ್ಟ್ ನಲ್ಲಿ ಜಪ್ತಿ ಮಾಡಲಾಗಿದೆ..
ಡಿಸೆಂಬರ್ 7 ರಂದು ನಡೆಯಲಿರುವ ಚುನಾವಣೆ ದೆಸೆಯಲ್ಲಿ ಈಗಾಗ್ಲೇ 100 ಕೋಟಿಗು ಅಧಿಕ ಹಣವನ್ನ ಜಪ್ತಿ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ.. ಸದ್ಯ ಈಗ ಸಿಕ್ಕಿರುವ ಹಣದ ಪೈಕಿ 35926 ಎರಡು ಸಾವಿರ ಮುಖಬೆಲೆಯಾಗಿದ್ರೆ, 20051 ನೋಟುಗಳು 500 ಮುಖಬೆಲೆಯನ್ನ ಹೊಂದಿವೆ…