ತೆಲುಗಿಗೆ ಓಡಿ ಹೋದ ರಶ್ಮಿಕಾ ಹವಾ 2 ವರ್ಷಕ್ಕೇ ನಾಶ!!

Date:

ಕನ್ನಡದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ನೇಮ್ ಫೇಮ್ ಪಡೆದುಕೊಂಡ ನಟಿ ರಶ್ಮಿಕಾ ಮಂದಣ್ಣ ನಂತರ ತೆಲುಗಿನ ಚಲೋ ಎಂಬ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಳು. ಕಾಲ ಕಳೆದಂತೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಲು ಶುರು ಮಾಡಿದ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರಗಳನ್ನು ಕಡೆಗಣಿಸುತ್ತಾ ಬಂದಳು.

ಕನ್ನಡಿಗರು ರಶ್ಮಿಕಾ ಕನ್ನಡ ಚಿತ್ರರಂಗವನ್ನು ಕಡೆಗಣಿಸುತ್ತಾ ಇರುವುದನ್ನು ಕಂಡು ಬೇಸರ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದರು. ಆದರೂ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ ತೆಲುಗು ಮತ್ತು ತಮಿಳು ಚಿತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾ ಬಂದಳು. ಆದರೆ ಯಾವುದೇ ಸಕ್ಸಸ್ ಆಗಲಿ ಹೆಚ್ಚಿನ ದಿನ ಉಳಿಯುವುದಿಲ್ಲ ಎಂಬುದನ್ನು ರಶ್ಮಿಕಾ ಮರೆತಿದ್ದಳು ಎಂದು ಕಾಣುತ್ತದೆ.

 

ತೆಲುಗು ತೆಲುಗು ಎಂದೂ ಕನ್ನಡವನ್ನು ಕಡೆಗಣಿಸಿ ರಶ್ಮಿಕಾ ಮಂದಣ್ಣಳನ್ನು ಇಂದು ಇಡೀ ದಕ್ಷಿಣ ಭಾರತ ಚಿತ್ರರಂಗದ ಪ್ರೇಕ್ಷಕರೇ ಕಡೆಗಣಿಸಿ ಬಿಟ್ಟಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ ರಶ್ಮಿಕಾ ಮಂದಣ್ಣ ಈ ವರ್ಷ ಮಕಾಡೆ ಮಲಗಿದ್ದಾಳೆ. ತೆಲುಗು ಚಿತ್ರರಂಗದಲ್ಲಿ ನೆಲೆಕಂಡುಕೊಂಡ ಯಾವುದೇ ನಟಿಯಾಗಲಿ ಕನಿಷ್ಠ ಐದಾರು ವರ್ಷ ಟಾಪ್ ಆಗಿ ರಾರಾಜಿಸುತ್ತಾಳೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಅದು ಪೂಜಾ ಹೆಗ್ಡೆ. ಹೌದು ಪೂಜಾ ಹೆಗ್ಡೆ ಹಲವಾರು ವರ್ಷಗಳಿಂದ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದಾಳೆ ಮತ್ತು ತನ್ನ ಜನಪ್ರಿಯತೆಯನ್ನು ಎಲ್ಲಿಯೂ ತಗ್ಗಿಸಿಕೊಂಡಿಲ್ಲ.

ಆದರೆ ರಶ್ಮಿಕಾ ಮಂದಣ್ಣಳ ಜನಪ್ರಿಯತೆ ಎರಡೇ ವರ್ಷಕ್ಕೆ ನೆಲಕಚ್ಚಿದೆ. ಈ ವರ್ಷ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಬರೀ ಮೆನ್ಷನ್ ಆಗಿರುವ ದಕ್ಷಿಣ ಭಾರತ ಚಿತ್ರರಂಗದ ನಟಿಯರ ಪಟ್ಟಿ ಬಿಡುಗಡೆಯಾಗಿದ್ದು ಕೀರ್ತಿ ಸುರೇಶ್ ಅಗ್ರಸ್ಥಾನದಲ್ಲಿದ್ದರೆ ಪೂಜಾ ಹೆಗ್ಡೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೂ ಇನ್ನುಳಿದಂತೆ ಹಲವಾರು ದಕ್ಷಿಣ ಭಾರತದ ನಟಿಯರು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರೆ ನ್ಯಾಷನಲ್ ಕ್ರಶ್ ಎಂದು ಬಿರುದು ಪಡೆದಿದ್ದ ರಶ್ಮಿಕಾ ಮಂದಣ್ಣ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದಾಳೆ.

ಹೆಚ್ಚು ಜನಪ್ರಿಯತೆ ಹೊಂದಿದ ನಟ ಆಗಲಿ ಅಥವಾ ನಟಿಯಾಗಲಿ ವರ್ಷಾಂತ್ಯದಲ್ಲಿ ಟ್ವಿಟ್ಟರ್ ಬಿಡುಗಡೆ ಮಾಡುವ ಈ ಪಟ್ಟಿಗಳಲ್ಲಿ ಸ್ಥಾನ ಪಡೆದುಕೊಂಡರೆ ಮಾತ್ರ ಮರ್ಯಾದೆ. ಇಲ್ಲದಿದ್ದರೆ ತಾನು ತುಂಬಾ ಜನಪ್ರಿಯತೆ ಹೊಂದಿದ್ದೇನೆ ನನಗೆ ಹಲವಾರು ಅಭಿಮಾನಿಗಳಿದ್ದಾರೆ ಎಂದು ಎಷ್ಟೇ ಪುಂಗಿ ಊದಿದರೂ ಕೂಡ ಯಾರೂ ನಂಬುವುದಿಲ್ಲ. ಸದ್ಯ ರಶ್ಮಿಕಾ ಮಂದಣ್ಣ ಪುಷ್ಪಾ ಚಿತ್ರದಲ್ಲಿ ಅಭಿನಯಿಸಿದ್ದು ಮುಂದೆ ಆಕೆ ಕೈನಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಚಿತ್ರಗಳು ಯಾವುವು ಇಲ್ಲ. ಇಲ್ಲಿಗೆ ರಶ್ಮಿಕಾ ಮಂದಣ್ಣಳ ಕೆಲ ದಿನಗಳ ಹಾರಾಟ ನಿಂತಂತೇ ಲೆಕ್ಕ..


 

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು...

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು: ಸಚಿವ ಮಧು ಬಂಗಾರಪ್ಪ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು:...

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ?

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ? ಬೆಲೆ ಏರಲಿ,...

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು ನಿಂಬೆಹಣ್ಣು ನಮ್ಮ...