ತೆಲುಗು ಬಳಸದೇ ಕನ್ನಡದಲ್ಲೇ ಸಲಹೆ ಕೊಟ್ಟ ಎನ್ ಟಿ ಆರ್

Date:

ಜ್ಯೂನಿಯರ್ ನಂದಮುರಿ ತಾರಕ ರಾಮಾರಾವ್ ಅವರ ಬಗ್ಗೆ ನಿಮಗೆಲ್ಲಾ ಹೆಚ್ಚೇನೂ ಹೇಳಬೇಕಿಲ್ಲ. ದಕ್ಷಿಣ ಭಾರತದ ಸ್ಟಾರ್ ನಟರು ಗಳಲ್ಲಿ ಒಬ್ಬರಾದ ಜ್ಯೂನಿಯರ್ ಎನ್ ಟಿ ಆರ್ ತೆಲುಗು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದಾರೆ. ಈ ಹಿಂದೆ ತನ್ನ ಆತ್ಮೀಯ ಗೆಳೆಯ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರದಲ್ಲಿ ಗೆಳೆಯಾ ಗೆಳೆಯಾ ಹಾಡನ್ನು ಹಾಡುವುದರ ಮೂಲಕ ಜೂನಿಯರ್ ಎನ್ಟಿಆರ್ ತನಗೆ ಕನ್ನಡ ಅತ್ಯದ್ಬುತವಾಗಿ ಬರುತ್ತದೆ ಎಂಬುದನ್ನು ತಿಳಿಸಿದ್ದರು.

 

 

ಇದಾದ ಬಳಿಕ ತಾವು ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕನ್ನಡದ ಸ್ಪರ್ಧಿಯೊಬ್ಬರ ಜೊತೆ ಮಾತನಾಡುವಾಗ ಕನ್ನಡವನ್ನೇ ಬಳಸಿದ್ದರು ಎನ್ ಟಿಆರ್. ಎನ್ ಟಿಆರ್ ಅವರ ತಾಯಿ ಕುಂದಾಪುರದವರಾದ್ದರಿಂದ ಎನ್ ಟಿಆರ್ ಅವರು ಕನ್ನಡವನ್ನು ಮಾತನಾಡಬಲ್ಲವರಾಗಿದ್ದಾರೆ.

 

 

ಇನ್ನೂ ಆಗಾಗ ಕನ್ನಡದಲ್ಲಿ ಮಾತನಾಡಿ ಕನ್ನಡದ ಮೇಲಿನ ತನ್ನ ಪ್ರೇಮವನ್ನು ವ್ಯಕ್ತಪಡಿಸುವ ಎನ್ ಟಿಆರ್ ಇದೀಗ ಕೊರೊನಾ ವೈರಸ್ ವಿರುದ್ಧ ಹೋರಾಡಲು ಜನರಿಗೆ ಸಂದೇಶವನ್ನು ನೀಡುವ ವಿಡಿಯೋದಲ್ಲಿ ತೆಲುಗು ಬಳಸದೆ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಹಲವಾರು ತಾರೆಯರು ಈ ವಿಡಿಯೋದಲ್ಲಿ ಮಾತನಾಡಿದ್ದು ಎನ್ಟಿಆರ್ ಅವರು ಮಾತ್ರ ಕನ್ನಡದಲ್ಲಿ ಮಾತನಾಡಿರುವುದು ಕನ್ನಡಿಗರ ಮನಸ್ಸನ್ನು ಗೆದ್ದಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ತುಣುಕು ವೈರಲ್ ಆಗಿದೆ.

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...