ಚಿತ್ರಮಂದಿರಕ್ಕೆ ಹೋಗುವುದು ಚಿತ್ರವನ್ನು ನೋಡಿ ಮೂರು ಗಂಟೆ ಮನರಂಜನೆಯನ್ನು ಪಡೆದುಕೊಂಡು ನಮ್ಮಲ್ಲಿರುವ ಬೇಜಾರನ್ನು ಹೋಗಲಾಡಿಸುವುದಕ್ಕೆ. ಹೀಗೆ ಚಿತ್ರಮಂದಿರಕ್ಕೆ ಪ್ರತಿಯೊಬ್ಬರೂ ಸಹ ಮನರಂಜನೆಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಹೋಗಿರುತ್ತಾರೆ ಚಿತ್ರ ಶುರುವಾಗುವ ಮುನ್ನ ನಮ್ಮ ರಾಷ್ಟ್ರಗೀತೆ ಪ್ರಸಾರವಾಗುತ್ತದೆ. 52 ಸೆಕೆಂಡ್ ಮಾತ್ರ ಇರುವ ಎಲ್ಲರ ಮೈ ರೋಮಾಂಚನ ವಾಗುವಂತಹ ಈ ಗೀತೆ ಕೇಳಿದಾಗ ಪ್ರತಿಯೊಬ್ಬರೂ ಸಹ ಚಿತ್ರಮಂದಿರದಲ್ಲಿ ನಿಂತು ರಾಷ್ಟ್ರಗೀತೆಗೆ ಗೌರವವನ್ನು ಸಲ್ಲಿಸುತ್ತಾರೆ. ಆದರೆ ಇತ್ತೀಚೆಗಷ್ಟೇ ಮಾಲ್ ವೊಂದರಲ್ಲಿ ಕೆಲ ಕಿಡಿಗೇಡಿಗಳು ರಾಷ್ಟ್ರಗೀತೆ ಬಂದರೂ ಸಹ ಕುಳಿತೇ ಅಗೌರವವನ್ನು ಸೂಚಿಸಿದ್ದಾರೆ.
ಹೌದು ಇತ್ತೀಚೆಗಷ್ಟೇ ಚಿತ್ರವೊಂದನ್ನು ನೋಡಲು ತೆರಳಿದ್ದ ನಟಿ ಐಶ್ವರ್ಯಾ ( ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು) ಅವರು ಚಿತ್ರ ವೀಕ್ಷಿಸಲು ತೆರಳಿದ್ದ ಚಿತ್ರಮಂದಿರದಲ್ಲಿ ಕೆಲವೊಂದಷ್ಟು ಕಿಡಿಗೇಡಿಗಳು ರಾಷ್ಟ್ರಗೀತೆ ಬಂದಾಗ ಎದ್ದು ನಿಲ್ಲದೇ ಕುಳಿತು ಅಗೌರವವನ್ನು ನೀಡಿದ್ದಾರೆ. ಇನ್ನು ಇದರಿಂದ ರೊಚ್ಚಿಗೆದ್ದ ಐಶ್ವರ್ಯ ಮತ್ತು ಸ್ನೇಹಿತರು ಅವರ ಬಳಿ ಹೋಗಿ ವಿಡಿಯೋ ಸಮೇತ ಅವರು ಮಾಡಿದ್ದ ತಪ್ಪನ್ನು ಬೆಳಕಿಗೆ ತಂದಿದ್ದಾರೆ. ಮೂರು ಗಂಟೆ ಸಿನಿಮಾ ನೋಡೋಕ್ಕೆ ಬರ್ತೀರಾ 52 ಸೆಕೆಂಡ್ ರಾಷ್ಟ್ರಗೀತೆಗೆ ಗೌರವ ಕೊಡೋಕೆ ಆಗಲ್ವ ಅಂತ ಆ ಕಿಡಿಗೇಡಿಗಳಿಗೆ ನೀತಿ ಪಾಠ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಚಿತ್ರಮಂದಿರದಿಂದ ಹೊರ ಕಳುಹಿಸಲಾಗಿದೆ.ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಆ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.