ಕೊರೊನಾ ವೈರಸ್ ನಂತರ ಮತ್ತೆ ಚಿತ್ರಮಂದಿರಗಳು ತೆರೆದಿವೆ ಹೊಚ್ಚ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಂದು ತೆಲುಗಿನ ರವಿತೇಜ ಅಭಿನಯದ ಕ್ರ್ಯಾಕ್ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಯಾವುದೇ ಚಿತ್ರಮಂದಿರದಲ್ಲಿಯೂ ಸಹ ಕ್ರ್ಯಾಕ್ ಸಿನಿಮಾ ಬಿಡುಗಡೆಯಾಗಿಲ್ಲ..
ತುಂಬಾ ದಿನಗಳ ನಂತರ ಚಿತ್ರಮಂದಿರದಲ್ಲಿ ಸಿನಿಮಾವನ್ನ ವೀಕ್ಷಿಸಬೇಕು ಎಂಬ ಆಸೆಯಿಂದ ಅಭಿಮಾನಿಗಳು ಬೆಳಿಗ್ಗೆಯಿಂದಲೇ ಚಿತ್ರಮಂದಿರಗಳ ಮುಂದೆ ಹಾಜರಾಗಿದ್ದರು. ಹಿಂದೆ ಯಾವ ರೀತಿ ಚಿತ್ರಮಂದಿರದ ಮುಂದೆ ಜನಸಾಗರವೇ ಸೇರುತ್ತಿತ್ತು ಅದೇ ರೀತಿ ಇಂದು ಸಹ ಚಿತ್ರಮಂದಿರಗಳ ಮುಂದೆ ಜನಸಾಗರ ಸೇರಿತ್ತು.
ಇನ್ನೇನು ಕೆಲವೇ ಕ್ಷಣಗಳಲ್ಲಿ ನೆಚ್ಚಿನ ನಟ ರವಿತೇಜ ಅವರನ್ನು ನೋಡಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೆ ಬೇಸರ ಕಾದಿತ್ತು. ಯಾಕೆಂದರೆ ಇಂದು ಬಿಡುಗಡೆಯಾಗಬೇಕಿದ್ದ ಸಿನಿಮಾದ ಪ್ರದರ್ಶನಗಳನ್ನು ತೆರವುಗೊಳಿಸಲಾಗಿದೆ ಎಂಬ ಸುದ್ದಿ ಕೇಳಿಬಂತು. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ದೊಡ್ಡಮಟ್ಟದ ನಿರಾಸೆ ಉಂಟಾಯಿತು. ನಿರ್ಮಾಪಕರು ಮತ್ತು ಡಿಸ್ಟ್ರಿಬ್ಯೂಟರ್ ಗಳ ನಡುವಿನ ಕಿತ್ತಾಟ ದಿಂದಾಗಿ ಪ್ರದರ್ಶನಗಳು ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿ ಇದೀಗ ತಿಳಿದುಬಂದಿದೆ.
ಥಿಯೇಟರ್ ಮುಂದೆ ಸೇರಿದ್ದ ಜನರು ನಿರಾಸೆಯಿಂದ ಮನೆಗಳಿಗೆ ತೆರಳಿದ್ದಾರೆ. ಇನ್ನೂ ಹಲವಾರು ಪ್ರೇಕ್ಷಕರು ಮಧ್ಯಾಹ್ನದ ಪ್ರದರ್ಶನವಾದರೂ ಶುರುವಾಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರಮಂದಿರಗಳ ಮುಂದೆ ಕಾದು ಕುಳಿತಿದ್ದಾರೆ. ಇನ್ನು ಇದೀಗ ಹರಿದಾಡುತ್ತಿರುವ ಸುದ್ದಿ ಪ್ರಕಾರ ಕ್ರ್ಯಾಕ್ ಸಿನಿಮಾವನ್ನು ಜ.13 ಕ್ಕೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ..