ಟ್ರಾಫಿಕ್ ರೂಲ್ಸ್ ಬಂದಾಗಿನಿಂದ ಕೆಲವು ಜನ ಅದಕ್ಕೆ ವಿರೋಧಿಸುತ್ತಲೆ ಮಧ್ಯಪ್ರದೇಶದಲ್ಲಿ ಯುವಕನೊಬ್ಬ ತನ್ನ ಬೈಕಿಗೆ ಪೋಲಿಸರು ದಂಡ ಹಾಕಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.ಆದರೆ ಸ್ಥಳೀಯರು ಹೇಳುವ ಪ್ರಕಾರ ಪೊಲೀಸರು ದಂಡದ ಜತೆಗೆ ಲಂಚ ನೀಡುವಂತೆ ಬೈಕ್ ಸವಾರನಿಗೆ ಹಿಂಸೆ ನೀಡಿದ್ದರು.
ಹತ್ತಿರದ ಜಂಕ್ಷನ್ ಗಳಲ್ಲಿ ಗುಂಪಾಗಿ ನಿಲ್ಲುವ ಪೊಲೀಸರು ಜನರಿಂದ ಸುಲಿಗೆ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ .ಬೈಕಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ ನಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.