ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅಂಡ್ ಗ್ಯಾಂಗ್ ನ ನ್ಯಾಯಾಂಗ ಬಂಧನದ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ. ಇಂದು ಪ್ರಕರಣದ ಎಲ್ಲಾ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಿರೊ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಪೊಲೀಸ್ರು ಮನವಿ ಮಾಡಿಕೊಳ್ಳಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ ಆರೋಪಿಗಳು, ತುಮಕೂರು ಜೈಲಿನಿಂದ 4 ಆರೋಪಿಗಳನ್ನ ಹಾಜರು ಪಡಿಸಲು ಸಿದ್ದತೆ ನಡೆದಿದೆ. ರೇಣುಕಾಸ್ವಾಮಿ ಕೊಲೆ ಸಂಬಂಧ ನಟ ದರ್ಶನ್, ಪವಿತ್ರಾಗೌಡ, ಪವನ್, ಪ್ರದೂಷ್, ವಿನಯ್, ದೀಪಕ್ ಸೇರಿ 17 ಮಂದಿ ಅರೆಸ್ಟ್ ಆಗಿದ್ದು
ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಪುನಃ ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ ಮಾಡಲಿದ್ದಾರೆ. ನ್ಯಾಯಾಂಗ ಬಂಧನ ವಿಸ್ತರಣೆಗೆ 10 ಕ್ಕು ಹೆಚ್ಚು ಅಂಶಗಳ ರಿಮ್ಯಾಂಡ್ ಅಪ್ಲಿಕೇಷನ್ ತಯಾರಿ ಮಾಡಲಾಗಿದೆ. ಇಂದು ಕೋರ್ಟ್ ಗೆ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಕೆಮಾಡಲಿದ್ದಾರೆ.
ದರ್ಶನ್’ಗೆ ಮತ್ತೆ ನ್ಯಾಯಾಂಗ ಬಂಧನ ಫಿಕ್ಸ್ ಆಗುತ್ತಾ..?
Date: