ಸದ್ಯ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿರುವ ಧಾರಾವಾಹಿ ಎಂದರೆ ಅದು ಝೀ ವಾಹಿನಿಯ ಜೊತೆಜೊತೆಯಲಿ. ಈ ಧಾರಾವಾಹಿ ಅತಿ ಹೆಚ್ಚು ಟಿಆರ್ಪಿ ಗಳಿಸಿ ಕೊಳ್ಳುವುದರ ಮುಖಾಂತರ ಹಳೆಯ ಧಾರಾವಾಹಿ ರೆಕಾರ್ಡ್ಗಳನ್ನು ಬ್ರೇಕ್ ಮಾಡಿದೆ. ಈ ಧಾರಾವಾಹಿ ಮುಖಾಂತರ ಅನಿರುಧ್ ಅವರು ಮತ್ತೆ ಫೇಮಸ್ ಆಗಿದ್ದಾರೆ ಹಾಗೂ ಈ ಧಾರಾವಾಹಿಯ ನಟಿ ಮೇಘ ಶೆಟ್ಟಿ ಅವರು ಸಹ ಅಪಾರವಾದ ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅನು ಪಾತ್ರವನ್ನು ಮಾಡಿರುವ ಮೇಘಾ ಶೆಟ್ಟಿ ಅವರು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಡಿ ಬಾಸ್ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟಿದ್ದಾರೆ.
ಹೌದು ಸಂದರ್ಶಕರು ಮೇಘಾ ಶೆಟ್ಟಿ ಅವರನ್ನು ನಿಮ್ಮ ನೆಚ್ಚಿನ ನಟ ಯಾರು ಎಂದು ಕೇಳಿದಾಗ ದರ್ಶನ್ ಅವರು ಎಂದು ಮೇಘಾ ಶೆಟ್ಟಿ ಅವರು ತಿಳಿಸಿದರು. ಅಷ್ಟೇ ಅಲ್ಲದೆ ದರ್ಶನ್ ಅವರು ನನಗೆ ಅಣ್ಣ ಇದ್ದ ಹಾಗೆ ಅವರನ್ನು ನಾನು ಅಣ್ಣ ನಂತೆಯೇ ಕಾಣುತ್ತೇನೆ ಎಂದು ಅವರು ದರ್ಶನ್ ಅವರ ಬಗ್ಗೆ ಹೇಳಿದರು. ಒಂದು ವೇಳೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತ ಅದನ್ನು ಮಿಸ್ ಮಾಡಿಕೊಳ್ಳುವುದಿಲ್ಲ ನನ್ನ ಅಣ್ಣನ ಜೊತೆ ನಟಿಸಲು ನನಗೆ ತುಂಬಾ ಇಷ್ಟ ಇದೆ ಎಂದು ಮೇಘಾ ಶೆಟ್ಟಿ ಅವರು ಹೇಳಿಕೊಂಡಿದ್ದಾರೆ.