ನಟ ದರ್ಶನ್ ಅವರ ಅದೃಷ್ಟದ ಮನೆಯ ಮೇಲೆ ಈ ಹಿಂದಿನಿಂದಲೂ ಸಹ ಒಂದು ಕಪ್ಪು ಚುಕ್ಕೆ ಇದ್ದು ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಈ ಮನೆಯನ್ನು ನಿರ್ಮಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇನ್ನು ಈ ವಿಚಾರವಾಗಿ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗಳು ನಡೆದಿದ್ದು ದರ್ಶನ್ ಅವರ ಮನೆಯನ್ನು ತೆರವುಗೊಳಿಸಲಾಗುತ್ತದೆ ಎಂದು ಸುದ್ದಿಗಳು ಹರಿದಾಡಿದ್ದವು.
ಇನ್ನು ಇದೀಗ ಬಿಎಸ್ ಯಡಿಯೂರಪ್ಪನವರು ಖಡಕ್ ಆಗಿ ಸಂದೇಶವನ್ನು ಹೊರಡಿಸಿದ್ದು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರನ್ನು ಬಿಡುವುದಿಲ್ಲ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇನ್ನು ಬಿಎಸ್ ಯಡಿಯೂರಪ್ಪನವರ ಈ ಹೇಳಿಕೆ ಬಂದ ಬೆನ್ನಲ್ಲೇ ಸುದ್ದಿಗಳು ಹರಿದಾಡುತ್ತಿದ್ದು ದರ್ಶನ್ ಅವರ ಮನೆಯನ್ನು ಸಹ ತೆರವು ಗೊಳಿಸಲಾಗುವುದು ಎಂದು ಮಾತುಗಳು ಕೇಳಿಬರುತ್ತಿವೆ. ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಸಹ ಬಿಡುವುದಿಲ್ಲ ಎಂಬ ಯಡಿಯೂರಪ್ಪನವರ ಹೇಳಿಕೆ ಇದೀಗ ಎಲ್ಲರಲ್ಲಿಯೂ ಆತಂಕ ಮೂಡಿಸಿದೆ.