ಚಿರತೆ ಸಾಯಿಸಲು ಅಮಾನವೀಯ ದಾರಿ ಹಿಡಿದ ಜನ. ಸುದ್ದಿ ಓದಿ.

Must read

ಚಿರತೆ ಹಾವಳಿಯಿಂದ ತಪ್ಪಿಸಿಕೊಳ್ಳಲು ಅರಣ್ಯ ಪ್ರದೇಶದ ಸಮೀಪ ಇರುವ ಗ್ರಾಮದ ಕೆಲ ಜನ ಚಿರತೆಯನ್ನು ಕೊಂದಿದ್ದಾರೆ. ಹೌದು ಚಿರತೆಗಳನ್ನು ಕೊಲ್ಲಲು ಇವರು ಉಪಯೋಗಿಸಿರುವ ಮಾರ್ಗ ಅತ್ಯಂತ ಅಮಾನವೀಯ ಮತ್ತು ಕಾನೂನು ಬಾಹಿರವಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಇಬ್ಬರು ಈ ಕೆಲಸವನ್ನು ಮಾಡಿದ್ದು ಚಿರತೆಗಳನ್ನು ಕೊಲ್ಲಲು ವಿಷ ಹಾಕಿದ್ದಾರೆ.

ಹೌದು ನಿರಂತರ ಚಿರತೆ ಹಾವಳಿಯಿಂದ ಬೇಸತ್ತಿದ್ದ ಇವರು ಸತ್ತು ಬಿದ್ದಿದ್ದ ನಾಯಿಯ ಮಾಂಸಕ್ಕೆ ವಿಷವನ್ನು ಹಾಕಿ ಇಟ್ಟಿದ್ದಾರೆ. ಇದನ್ನು ಸೇವಿಸಿದ 10 ವರ್ಷದ ಹೆಣ್ಣು ಚಿರತೆ ಮತ್ತು 8 ತಿಂಗಳ ಎರಡು ಚಿರತೆಗಳು ಸಾವನ್ನಪ್ಪಿವೆ. ಇನ್ನು ಚಿರತೆಗಳಿಗೆ ವಿಷ ಹಾಕಿದ ಇಬ್ಬರ ಮೇಲೆ ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಅವರಿಬ್ಬರೂ ಗ್ರಾಮದಿಂದ ಕಣ್ಮರೆ ಆಗಿದ್ದಾರೆ.

- Advertisement -spot_img

More articles

- Advertisement -spot_img

Latest article