ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಜಮಾನ ಮತ್ತು ಕುರುಕ್ಷೇತ್ರ ಚಿತ್ರಗಳ ಬ್ಯಾಕ್ ಟು ಬ್ಯಾಕ್ ಗೆಲುವಿನೊಂದಿಗೆ ಈ ವರ್ಷ ಹಿಟ್ ಲಿಸ್ಟ್ ನಲ್ಲಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ ಒಡೆಯ ದಲ್ಲಿ ಸದ್ಯ ಅವರು ಬ್ಯುಸಿ ಆಗಿದ್ದಾರೆ. ನಿರ್ದೇಶಕ ಎಂಡಿ ಶ್ರೀಧರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಂಬಿನೇಷನ್ನ ಮೂರನೇ ಚಿತ್ರ ಒಡೆಯ.
ಈ ಹಿಂದೆ ಪೊರ್ಕಿ ಮತ್ತು ಬುಲ್ಬುಲ್ ಚಿತ್ರಗಳನ್ನು ನೀಡಿದ್ದ ಈ ಜೋಡಿ ಇದೀಗ ಒಡೆಯ ದೊಂದಿಗೆ ಮತ್ತೆ ಬರುತ್ತಿದೆ. ಇನ್ನು ಒಡೆಯ ಚಿತ್ರದ ಹಾಡೊಂದರ ತುಣುಕು ಇದೀಗ ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಎಬ್ಬಿಸುತ್ತಿದೆ. ದರ್ಶನ್ ಅವರು ಮಗುವೊಂದನ್ನು ಎತ್ತಿಕೊಂಡು ಆಟವಾಡಿಸುತ್ತಿರುವ ವಿಡಿಯೋ ಇದೀಗ ಲೀಕ್ ಆಗಿದ್ದು ಅಭಿಮಾನಿಗಳು ಸಕತ್ ಥ್ರಿಲ್ ಆಗಿದ್ದಾರೆ.