ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಇಬ್ಬರು ಸ್ಟಾರ್ ನಟರು. ಒಂದು ಕಾಲದಲ್ಲಿ ಇಬ್ಬರೂ ತುಂಬಾ ಆತ್ಮೀಯರಾಗಿದ್ದರು. ಆದರೆ, ಯಾವುದೋ ಒಂದು ವಿಷ ಗಳಿಗೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಬಂದಿದೆ. ದರ್ಶನ್ ನೇರವಾಗಿಯೇ ಸುದೀಪ್ ಜೊತೆಗಿನ ಸ್ನೇಹಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಆದರೆ, ಆ ಬಳಿಕ ಸುದೀಪ್ ಅನೇಕ ಬಾರಿ ದರ್ಶನ್ ಬಗ್ಗೆ ಮಾತಾಡಿದ್ದಾರೆ. ಆದರೆ ದರ್ಶನ್ ಮಾತ್ರ ಸುದೀಪ್ ಬಗ್ಗೆ ಮಾತೇ ಆಡಿಲ್ಲ.
ಸುದೀಪ್ ದರ್ಶನ್ ಅವರ ಸ್ನೇಹಕ್ಕಾಗಿ ಹಾತೊರೆಯುತ್ತಿದ್ದಾರೆ. ದರ್ಶನ್ಗೂ ಗೆಳೆಯ ಸುದೀಪ್ ಎಂದರೆ ತುಂಬಾ ಇಷ್ಟವೇ. ಅದೇಕ ಸಿಟ್ಟು ದಚ್ಚುಗೆ. ಆದರೆ ಒಂದಲ್ಲ ಒಂದು ದಿನ ಸುದೀಪ್ ಸ್ನೇಹ ಹಸ್ತಕ್ಕೆ ದರ್ಶನ್ ಕೂಡ ಕೈ ಜೋಡಿಸಿ ಮತ್ತೆ ಒಂದಾಗುವುದರಲ್ಲಿ ಡೌಟಿಲ್ಲ.
ಇದೀಗ ಸುದೀಪ್ ಮತ್ತೊಮ್ಮೆ ತನ್ನ ಗೆಳೆಯ ದರ್ಶನ್ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸುದೀಪ್, ದರ್ಶನ್ ಹೃದಯದ ಮಾತು ಹೇಳಬೇಕು ಎಂದು ಹೇಳಿದ್ದಾರೆ. ದರ್ಶನ್ ಸಾಧನೆ ಮಾಡಲು ಎಲ್ಲಾ ರೀತಿಯ ಸಾಮರ್ಥ್ಯ ಹೊಂದಿದ್ದಾರೆ. ಅವರು ಹೃದಯದ ಮಾತನ್ನು ಮಾತ್ರ ಕೇಳಬೇಕು ಎಂದಿದ್ದಾರೆ ಸುದೀಪ್.
ನನ್ನೊಂದಿಗೆ ಸ್ನೇಹ ಹಂಚಿಕೊಂಡರವರಿಗೆ ಸಾಯುವವರೆಗೂ ನನ್ನ ಹೃದಯದಲ್ಲಿ ಸ್ಥಾನ ನೀಡಿದ್ದೀನಿ. ನಾನೇನು ಅವರಿಂದ ದೂರವಾಗಿಲ್ಲ ಎಂದು ಹೇಳುವ ಸುದೀಪ್ ತಮ್ಮ ಮನೆಯಲ್ಲಿ ದರ್ಶನ್ ಜೊತೆಗಿನ ಫೋಟೋವನ್ನು ಇನ್ನೂ ಹಾಗೇ ಇಟ್ಟುಕೊಂಡಿದ್ದಾರೆ.
ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗಲಿ.. ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಲಿ ಅನ್ನೋದು ಇಬ್ಬರ ಅಭಿಮಾನಿಗಳ ಆಶಯ ಕೂಡ.