ವಿಶ್ವವಿಖ್ಯಾತ ಮೈಸೂರು ದಸರಾ ಎಲ್ಲ ಬಾರಿಯಂತೆ ಈ ಬಾರಿಯೂ ಸಹ ಬಹಳ ವಿಜೃಂಭಣೆ ಮತ್ತು ಸಾಂಸ್ಕೃತಿಕವಾಗಿ ನಡೆಯಿತು. ಯಾವುದೇ ರೀತಿಯ ಅಪಸ್ವರ ಮತ್ತು ಕುಂದು ಕೊರತೆ ಉಂಟಾಗದೇ ಮೈಸೂರು ದಸರಾ ಅದ್ಧೂರಿಯಾಗಿ ನಡೆದಿದ್ದು ಎಲ್ಲರಲ್ಲೂ ಖುಷಿಯನ್ನು ತಂದಿದೆ. ಇನ್ನು ಮೈಸೂರು ದಸರಾದಲ್ಲಿ ಈ ಬಾರಿ ಜನರನ್ನು ದೀಪಾಲಂಕಾರ ಹೆಚ್ಚಾಗಿ ಆಕರ್ಷಿಸಿದ್ದು ನಿಜ. ಅದು ಈ ಬಾರಿ ದೀಪಾಲಂಕಾರವನ್ನು ಅದ್ದೂರಿಯಾಗಿ ಮಾಡಲಾಗಿತ್ತು ಈ ದೀಪಾಲಂಕಾರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು.
ಇನ್ನು ದಸರಾ ಮುಗಿಯುತ್ತಿದ್ದಂತೆ ದೀಪಾಲಂಕಾರವು ಸಹ ಮುಗಿಯುತ್ತದೆ ಎಂದು ಜನರು ಅಂದುಕೊಳ್ಳುತ್ತಿದ್ದರು. ದಸರಾ ವೇಳೆ ಅತಿ ಹೆಚ್ಚು ಜನ ಬರುವ ಕಾರಣ ದೀಪಾಲಂಕಾರವನ್ನು ನೋಡಲಾಗದ ಕೆಲ ಮಂದಿ ಬೇಸರಗೊಂಡಿದ್ದರು. ಆದರೆ ಇದೀಗ ಸಿಹಿ ಸುದ್ದಿಯೊಂದು ಬಂದಿತ್ತು ದೀಪಾಲಂಕಾರ ಅಕ್ಟೋಬರ್ 17 ರ ವರೆಗೂ ಸಹ ಇರಲಿದೆ. ಹೌದು ಇನ್ನೂ ಒಂದು ವಾರದ ಕಾಲ ಮೈಸೂರಿನಲ್ಲಿ ದೀಪಾಲಂಕಾರ ಜಗಮಗಿಸಲಿದೆ ದಸರಾ ವೇಳೆ ಇದ್ದ ಕಲೆ ಇನ್ನೂ ಒಂದು ವಾರ ಜನರ ಕಣ್ಣಿಗೆ ಬೀಳಲಿದೆ.