ಸೀರಿಯಲ್ ಕಮ್ ಸಿನಿಮಾ ಲೋಕದ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ.. ಇಬ್ಬರ ನಡುವೆ ಹಲವು ವರ್ಷಗಳಿಂದ ಸ್ನೇಹವಿತ್ತು. ಕೆಲವು ವರ್ಷಗಳಿಂದ ಅದು ಪ್ರೀತಿಯಾಗಿ ತಿರುಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಜೊತೆಗಿರುವ ಫೋಟೋಗಳು ವೈರಲ್ ಆದಾಗ ಏನ್ ಸಮಾಚಾರ ಅಂತ ಕೇಳಿದಾಗ ಇಬ್ಬರ ಕಡೆಯಿಂದ ‘ನೋ ನೋ ನಾವಿಬ್ಬರು ಜಸ್ಟ್ ಬೆಸ್ಟ್ ಫ್ರೆಂಡ್ಸ್ ಅಷ್ಟೆ’ ಅನ್ನೊರು.
ಆದ್ರೆ ಕಳೆದ ಏಪ್ರಿಲ್ ತಿಂಗಳ 2ನೇ ತಾರೀಖ್ ಉಂಗುರ ಬದಲಾಯಿಸಿಕೊಳ್ಳುವ ಫೋಟೋವನ್ನ ಸೋಶಿಯಲ್ ಮೀಡಿಯಾಗೆ ಬಿಟ್ಟು ‘ಹೌದು ನಾವಿಬ್ಬರು ಪ್ರೇಮಿಗಳು ಮುಂದೊಂದಿನ ಮದುವೆಯಾಗೋರು’ ಅಂತ ಕನ್ಫರ್ಮ್ ಮಾಡಿದ್ರು. ಅದರಂತೆ ಈಗ ಕಿರುತೆರೆ ಮತ್ತು ಹಿರಿತೆರೆ ನಟ ನಟಿರಿಬ್ಬರು ಮದು ಮಕ್ಕಳಾಗಿ ಮದುವೆಯಾಗಿದ್ದಾರೆ. ಲಾಕ್ ಡೌನ್ ನಡುವೆ ಮಾಸ್ಕ್ ಧರಿಸಿ ಸರಳವಾಗಿ ವಿವಾಹವಾಗಿದ್ದಾರೆ ಚಂದನ್ ಮತ್ತು ಕವಿತಾ.
ಮಾಹಿತಿ ಪ್ರಕಾರ ಚಂದನ್ ಕುಮಾರ್ ಅವರ ಸಹಾಕರ್ ನಗರದ ಮನೆಯಲ್ಲಿ ಗುರುಹಿರಿಯ ಸಮುಖದಲ್ಲಿ ಸರಳ ಸುಂದರ ವಿವಾಹ ಮಹೋತ್ಸವ ಇಂದು ನೆರವೇರಿತ್ತು. ಚಿನ್ನು ಖ್ಯಾತಿಯ ಕವಿತಾ ಗೌಡ ಹಾಗೂ ಪ್ರೇಮಬರಹ ಖ್ಯಾತಿಯ ಚಂದನ್ ಕುಮಾರ್ ಮಾಸ್ಕ್ ಹಾಕೊಂಡೆ ಮದುವೆಯಾಗಿರೋದು ವಿಶೇಷ.