ಮತ್ತೆ 1 ವಾರ ಲಾಕ್ ಡೌನ್!

0
28

ತಿರುವನಂತಪುರ: ಕೇರಳದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೆ ತಂದಿದ್ದ ಲಾಕ್‍ಡೌನನ್ನು 1 ವಾರ ಕಾಲ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ ಕೇರಳದಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದು, ಮೇ 8ರಿಂದ 16ರವರೆಗೆ ಲಾಕ್‍ಡೌನ್ ಘೋಷಿಸಿತ್ತು. ಆದರೆ ಲಾಕ್‍ಡೌನ್ ಇದ್ದರೂ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತೆ 1 ವಾರ ಕಾಲ ವಿಸ್ತರಣೆ ಮಾಡಿದ್ದು, ಮೇ 23ರವರೆಗೆ ಲಾಕ್‍ಡೌನ್ ಜಾರಿಯಲ್ಲಿರಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಟ್ರಿಪಲ್ ಲಾಕ್‍ಡೌನ್: ತಿರುವನಂತಪುರ, ತ್ರಿಶೂರ್, ಎರ್ನಾಕುಳಂ ಹಾಗೂ ಮಲಪ್ಪುರಂ ಜಿಲ್ಲೆಗಳನ್ನು ಟ್ರಿಪಲ್ ಲಾಕ್‍ಡೌನ್ ಮಾಡಲಾಗುವುದು. ಕೋವಿಡ್ ಹರಡುವಿಕೆ ತಡೆಯಲು ಮತ್ತಷ್ಟು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು. ಈ ನಾಲ್ಕು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಈ ಕ್ರಮ ಅನಿವಾರ್ಯ ಎಂದು ಸಿಎಂ ಹೇಳಿದರು.

ಎಷ್ಟು ಪ್ರಕರಣ?: ಇಂದು ಕೇರಳದಲ್ಲಿ 34,694 ಹೊಸ ಪ್ರಕರಣಗಳು ದಾಖಲಾಗಿದೆ. ರಾಜ್ಯದ ಒಟ್ಟಾರೆ ಟೆಸ್ಟ್ ಪಾಸಿಟಿವಿಟಿ ಪ್ರಮಾಣ ಶೇ.26.41ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 1,31,375 ಸ್ಯಾಂಪಲ್‍ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಸದ್ಯ ಕೇರಳದಲ್ಲಿ ಒಟ್ಟು 844 ಹಾಟ್‍ಸ್ಪಾಟ್‍ಗಳಿವೆ.

 

LEAVE A REPLY

Please enter your comment!
Please enter your name here