ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ..?
ದಾಲ್ಚಿನ್ನಿ ಮರದ ತೊಗಟೆಯಾಗಿದೆ, ಇದು ತೆಳುವಾದ, ಹಳದಿ ಬಣ್ಣದಿಂದ ಕೂಡಿದ್ದು ಮತ್ತು ತುಂಬಾ ಪರಿಮಳಯುಕ್ತವಾಗಿದೆ. ದಾಲ್ಚಿನ್ನಿ ಕಡ್ಡಿಗಳನ್ನು ಭಾರತೀಯ ರೆಸ್ಟೊರೆಂಟ್‌ಗಳು ಮಸಾಲೆಯಾಗಿ ಬಳಸುತ್ತವೆ . ದಾಲ್ಚಿನ್ನಿ ಆರೋಗ್ಯ ಮತ್ತು ಶಕ್ತಿಯುತ ಔಷಧೀಯ ಗುಣಗಳನ್ನು ಹೊಂದಿದೆ. ಪ್ರತಿದಿನ ಸುಮಾರು ಒಂದು ಲೋಟ ದಾಲ್ಚಿನ್ನಿ ನೀರಿನ ಸೇವನೆ ಯಾರು ಮಾಡುತ್ತಾರೆ ಅವರಿಗೆ ಆರೋಗ್ಯ ತೊಂದರೆಗಳು ಅಷ್ಟಾಗಿ ಇರುವುದಿಲ್ಲ. ಈ ಕೆಳಗಿನ ಬಗೆಯ ಆರೋಗ್ಯದ ಪ್ರಯೋಜನಗಳನ್ನು ನಾವು ದಾಲ್ಚಿನ್ನಿ ನೀರಿನಿಂದ ನಿರೀಕ್ಷೆ ಮಾಡಬಹುದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ
ಹೃದಯಾಘಾತದ ಅಥವಾ ಹೃದಯಕ್ಕೆ ಸಂಬಂಧಪಟ್ಟ ಜೊತೆಗೆ ಉಸಿರಾಟಕ್ಕೆ ಸಂಬಂಧಪಟ್ಟ ಯಾವುದೇ ಕಾಯಿಲೆಗಳು ಉಂಟಾಗದಂತೆ ದಾಲ್ಚಿನ್ನಿ ನೀರು ದೇಹದ ಮೇಲೆ ಪ್ರಭಾವವನ್ನು ಬೀರುತ್ತದೆ. ಏಕೆಂದರೆ ನೈಸರ್ಗಿಕವಾಗಿ ಇದರಲ್ಲಿ ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.
ಮುಟ್ಟಿನ ಸೆಳೆತ
ಮಹಿಳೆಯರ ದೇಹದ ನೈಸರ್ಗಿಕ ಪ್ರಕ್ರಿಯೆ ಎನಿಸಿಕೊಂಡ ಋತುಚಕ್ರದಲ್ಲಿ ಉಂಟಾಗುವ ಮೈ ಕೈ ಸೆಳೆತ ಅಥವಾ ಮಾಂಸಖಂಡಗಳ ನೋವು ಇತ್ಯಾದಿಗಳನ್ನು ಅತ್ಯಂತ ಸುಲಭವಾಗಿ ದೂರಮಾಡುವ ಗುಣವನ್ನು ನಾವು ದಾಲ್ಚಿನ್ನಿಯಲ್ಲಿ ಕಾಣಬಹುದು. ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ದಾಲ್ಚಿನ್ನಿಯ ಉರಿಯೂತ ವಿರೋಧಿ ಪ್ರಭಾವವನ್ನು ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತವೆ.
ಸಕ್ಕರೆ ಕಾಯಿಲೆ ವಿರುದ್ಧ ರಕ್ಷಣೆ ನೀಡುತ್ತದೆ
ದಾಲ್ಚಿನ್ನಿ ಚಕ್ಕೆಯನ್ನು ನೀವು ಜಗಿದು ತಿಂದರೆ ಅದು ಬಾಯಿಗೆ ಸಿಹಿ ಪ್ರಭಾವವನ್ನು ಕೊಡುತ್ತದೆ. ಹಾಗೆಂದು ಇದು ಸಕ್ಕರೆ ಕಾಯಿಲೆಯನ್ನು ಉಂಟುಮಾಡುತ್ತದೆ ಎಂದಲ್ಲ.ಬದಲಿಗೆ ಸಕ್ಕರೆ ಕಾಯಿಲೆಯ ವಿರುದ್ಧ ಹೋರಾಡುವ ಗುಣವನ್ನು ಇದು ಪಡೆದುಕೊಂಡಿದೆ. ದೇಹದಲ್ಲಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಅಂಶವನ್ನು ಉತ್ಪತ್ತಿ ಮಾಡಿ ಆಹಾರದಲ್ಲಿ ಕಂಡುಬರುವ ಗ್ಲೂಕೋಸ್ ಅಂಶವನ್ನು ದೇಹ ಹೀರಿಕೊಳ್ಳುವಂತೆ ಮಾಡುತ್ತದೆ. ಇದು ಅನೇಕ ಬಗೆಯ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಸಹ ಪರಿಹರಿಸಲು ಸಹಾಯವಾಗುತ್ತದೆ. ಹೃದಯರಕ್ತನಾಳದ ಕಾಯಿಲೆಗಳು ಇದರಿಂದ ದೂರವಾಗುತ್ತದೆ ಎಂದು ಹೇಳಬಹುದು.
ಚಯಾಪಚಯವನ್ನು ಹೆಚ್ಚಿಸುತ್ತದೆ
ದಾಲ್ಚಿನ್ನಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರಿಗೆ ಇದು ಅಪರೂಪದ ಪ್ರಯೋಜನಗಳನ್ನು ನೀಡಬಹುದು.ಹೌದು, ದಾಲ್ಚಿನ್ನಿಯಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದಾಗಿ ಇದು ತೂಕ ನಷ್ಟಕ್ಕೆ ಪರೋಕ್ಷವಾಗಿ ನೆರವಾಗುತ್ತದೆ. ದಾಲ್ಚಿನ್ನಿ ನೀರನ್ನು ಬೆಳಿಗ್ಗೆ ಸೇವಿಸುವುದರಿಂದ ಹೊಟ್ಟ ತುಂಬಿದಂಥ ಪೂರ್ಣತೆಯ ಭಾವನೆಗಳನ್ನು ಉತ್ತೇಜಿಸುತ್ತದೆ.ಇದರಿಂದ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ದಾಲ್ಚಿನ್ನಿ ಚಯಾಪಚಯವನ್ನು ಹೆಚ್ಚಿಸುವುದರಿಂದ ನಿಮ್ಮ ತೂಕ ನಷ್ಟ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.