ದಾಳಿಂಬೆ ತಿಂದು ಸಿಪ್ಪೆ ಬಿಸಾಕ್ಬೇಡಿ: ಇರದಲ್ಲಿಯೂ ಅಡಗಿದೆ ನಾನಾ ಆರೋಗ್ಯ ಪ್ರಯೋಜನಗಳು!

Date:

ದಾಳಿಂಬೆ ತಿಂದು ಸಿಪ್ಪೆ ಬಿಸಾಕ್ಬೇಡಿ: ಇರದಲ್ಲಿಯೂ ಅಡಗಿದೆ ನಾನಾ ಆರೋಗ್ಯ ಪ್ರಯೋಜನಗಳು!

 

ಒಂದು ದಾಳಿಂಬೆ  ನೂರು ರೋಗ ಗುಣಪಡಿಸಬಹುದು ಎಂಬ ಮಾತಿದೆ. ಹೌದು, ದಾಳಿಂಬೆಯಲ್ಲಿರುವ ಅನೇಕ ಅಗತ್ಯ ಪೋಷಕಾಂಶಗಳು ಸೂಪರ್ ಫುಡ್ಸ್ ಪಟ್ಟಿಯಲ್ಲಿದು ಸೇರಿದೆ. ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ, ಒಬ್ಬ ವ್ಯಕ್ತಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮತ್ತು ದೇಹದಲ್ಲಿನ ಸಂಪೂರ್ಣ ಕಬ್ಬಿಣದ ಕೊರತೆಯನ್ನು ಸರಿಪಡಿಸಬಹುದು. ದಾಳಿಂಬೆಯಲ್ಲಿ ಸಾಕಷ್ಟು ನಾರಿನಂಶ, ಜಿಂಕ್ , ಪೊಟ್ಯಾಸಿಯಮ್, ಕಬ್ಬಿಣ ಮತ್ತು ಒಮೆಗಾ 6 ಇದೆ. ಇದು ವ್ಯಕ್ತಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ತರುತ್ತೆ.ದಾಳಿಂಬೆ ಸಿಪ್ಪೆಗಳಲ್ಲಿ ಕೂಡ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ,

ದಾಳಿಂಬೆ ಸಿಪ್ಪೆ ಎಸೆಯುವ ಮುನ್ನಾ ಅದರಲ್ಲಿರುವ ಪ್ರಯೋಜಕಾರಿ ಅಂಶಗಳನ್ನು ತಿಳಿದುಕೊಳ್ಳಬೇಕು.

 

ಮುಟ್ಟಿನ ನೋವು ನಿವಾರಣೆ ಇತ್ತೀಚೆಗೆ ಬಹಳಷ್ಟು ಹೆಣ್ಣು ಮಕ್ಕಳು ಅನಿಯಮಿತ ಮುಟ್ಟಿನಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ಮೂರು ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದಾರೆ. ಮುಟ್ಟಾದಾಗ ವಿಪರೀತ ಹೊಟ್ಟೆ ನೋವಾಗುವುದು. ಆ ನೋವಿಗೆ ದಾಳಿಂಬೆ ಸಿಪ್ಪೆ ಮದ್ದಾಗಿದೆ. ಒಂದು ಲೋಟದ ನೀರಿಗೆ ಒಂದು ಚಮಚ ದಾಳಿಂಬೆ ಸಿಪ್ಪೆಯ ಪುಡಿಯನ್ನು ಹಾಕಿ, ಬೆರೆಸಿ ಕುಡಿಯಬೇಕು. ಇದರಿಂದ ಹೊಟ್ಟೆ ನೋವು ಕಡಿಮೆಯಾಗುವ ಜೊತೆಗೆ ಹೆಚ್ಚು ರಕ್ತಸ್ರಾವ ಆಗುತ್ತಿದ್ದರೂ ನಿಯಂತ್ರಣಕ್ಕೆ ತರುವುದು.

ಮುಖದ ಸುಕ್ಕು ಮುಖದಲ್ಲಿ ಸುಕ್ಕು, ನೆರಿಗೆಯಿಂದ ವಯಸ್ಸಾದಂತೆ ಕಾಣುತ್ತಾರೆ. ಹಾಗಾಗಿ ಮುಖದ ಮೇಲಿರುವ ಸುಕ್ಕನ್ನು ಕಡಿಮೆ ಮಾಡಲು ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. ದಾಳಿಂಬೆ ಸಿಪ್ಪೆಯ ಪುಡಿಯನ್ನು ರೋಸ್ ವಾಟರ್​ನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ರೆಡಿಯಾದ ಪೇಸ್ಟ್ನ ಮುಖಕ್ಕೆ ಹಚ್ಚಿ. ಹಚ್ಚಿದ ಪೇಸ್ಟ್ ಒಣಗಿದ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ಹೃದಯಕ್ಕೆ ಹೆಚ್ಚು ಪ್ರಯೋಜನಕಾರಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ದಾಳಿಂಬೆ ಸಿಪ್ಪೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅಧ್ಯಯನದ ಪ್ರಕಾರ, ದಾಳಿಂಬೆ ಸಿಪ್ಪೆಯಲ್ಲಿರುವ ಮೆಥನಾಲ್ ಸಾರವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಕೊಲೆಸ್ಟ್ರಾಲ್​ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಾಯಿಯಲ್ಲಿ ಹರಡುವ ರೋಗಾಣು ವಿರುದ್ಧ ಹೋರಾಟ ದಾಳಿಂಬೆ ಸಿಪ್ಪೆಗಳಲ್ಲಿ ಪಾಲಿಫೆನಾಲಿಕ್ ಫ್ಲೇವನಾಯ್ಡ್​ಗಳಿವೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿರುತ್ತದೆ. ಬಾಯಿಯಲ್ಲಿ ಹರಡುವ ರೋಗಾಣುಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಕೆಟ್ಟ ಉಸಿರಾಟದ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ದಾಳಿಂಬೆ ಸಿಪ್ಪೆಯನ್ನು ಬಾಯಿ ಫ್ರೆಶರ್ನಂತೆ ಬಳಸಬಹುದು. ದಾಳಿಂಬೆಯ ಸಿಪ್ಪೆಯನ್ನು ಒಣಗಿಸಿ ಪೇಸ್ಟ್ ಮಾಡಿ. ಒಂದು ಚಮಚ ದಾಳಿಂಬೆ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಕುಡಿಯಿರಿ.

ಸನ್ ಟ್ಯಾನ್ಗೆ ಪರಿಹಾರ ಬಿಸಿಲಿಗೆ ಹೋದರೆ ಟ್ಯಾನ್ ಆಗುವುದು ಸಹಜ. ಟ್ಯಾನ್ ಆದರೆ ಸೌಂದರ್ಯ ಕಡಿಮೆಯಾಗುವುದು ನಿಜ. ಟ್ಯಾನ್ ಆಯ್ತು ಅಂತ ಭಯಪಡುವ ಅಗತ್ಯವಿಲ್ಲ. ಇದಕ್ಕೆ ಪರಿಹಾರ ಮನೆಯಲ್ಲೆ ಇದೆ. ದಾಳಿಂಬೆ ಸಿಪ್ಪೆಯನ್ನು ಸನ್ ಸ್ಕ್ರೀನ್​ನಂತೆ ಬಳಸಬಹುದು. ಒಣ ಸಿಪ್ಪೆಯನ್ನು ಎಣ್ಣೆಯೊಂದಿಗೆ ಬೆರೆಸಿ, ಮುಖಕ್ಕೆ ಹಚ್ಚಬೇಕು. ಇದರಿಂದ ಟ್ಯಾನ್ ಕಡಿಮೆಯಾಗುತ್ತದೆ.

Share post:

Subscribe

spot_imgspot_img

Popular

More like this
Related

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?

ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ? ಹಿಂದೂ ಧರ್ಮದಲ್ಲಿ...