ದಿನಸಿ ಮಾರಾಟಕ್ಕೆ ಮುಂದಾದ ಜ್ಯೊಮ್ಯಾಟೋ!

Date:

ಹೊಸದಿಲ್ಲಿ: ಆ್ಯಪ್‌ ಮೂಲಕ ಮನೆ ಬಾಗಿಲಿಗೆ ಆಹಾರ ಉತ್ಪನ್ನಗಳನ್ನು ತಲುಪಿಸುವ ಜೊಮ್ಯಾಟೊ ಶೀಘ್ರದಲ್ಲಿಯೇ ತನ್ನ ಆ್ಯಪ್‌ನಲ್ಲಿ ದಿನಸಿ ಉತ್ಪನ್ನಗಳ ವಿಭಾಗ ಆರಂಭಿಸುವುದಾಗಿ ತಿಳಿಸಿದೆ.

ಗುರ್‌ಗಾಂವ್‌ ಮೂಲದ ಜೊಮ್ಯಾಟೊ ಕಳೆದ ವರ್ಷ ದಿನಸಿ ಉತ್ಪನ್ನ ಮಾರಾಟಕ್ಕೆ ಯತ್ನಿಸಿತ್ತು. ಆದರೆ ನಂತರ ಕೈಬಿಟ್ಟಿತ್ತು. ಈಗ ಹೊಸತಾಗಿ ಆರಂಭಿಸುವುದಾಗಿ ತಿಳಿಸಿದೆ. ಕಂಪನಿಯು ಆರಂಭಿಕ ಷೇರು ಬಿಡುಗಡೆಗೂ (ಐಪಿಒ) ಮುಂದಾಗಿದ್ದು, ಮೊದಲ ಯತ್ನದಲ್ಲೇ 9,375 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ.

ಜೊಮ್ಯಾಟೊ ಮೂಲಕ ಆಹಾರೋತ್ಪನ್ನಗಳನ್ನು ತರಿಸಿಕೊಳ್ಳುವ ಗ್ರಾಹಕರಿಗೆ ಮನೆಯಲ್ಲೇ ಆಹಾರ ತಯಾರಿಸಲೂ ದಿನಸಿ ಉತ್ಪನ್ನಗಳು ಬೇಕಾಗುತ್ತವೆ. ನಮ್ಮದೇ ವಿತರಣೆಯ ನೆಟ್‌ವರ್ಕ್ ಇರುವುದರಿಂದ ದಿನಸಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ ಎಂದು ಜೊಮ್ಯಾಟೊ ತಿಳಿಸಿದೆ. ಜೊಮ್ಯಾಟೊ ಈ ಸಂಬಂಧ ಸ್ಥಳೀಯ ಕಿರಾಣಾ ಅಂಗಡಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಿದೆಯೇ ಎಂಬುದು ತಿಳಿದುಬಂದಿಲ್ಲ.


ಇನ್ನೊಂದೆಡೆ ಇತ್ತೀಚೆಗೆ ಕಂಪನಿ ದಿನಸಿ ಮಾರಾಟ ಆ್ಯಪ್‌ ಗ್ರೋಫರ್ಸ್‌ನಲ್ಲಿ ಭಾರಿ ಮೊತ್ತ ಹೂಡಿಕೆ ಮಾಡಿದೆ. ಹೀಗಾಗಿ ಜೊಮ್ಯಾಟೊದ ದಿನಸಿ ವಿಭಾಗದಲ್ಲಿ ಗ್ರೋಫರ್ಸ್‌ನ ಪಾಲುದಾರಿಕೆ ಇರಲಿದೆಯೇ ಎಂಬುದು ಸ್ಪಷ್ಟಗೊಂಡಿಲ್ಲ.
ಮಾರ್ಚ್‌ಗೆ ಅಂತ್ಯಗೊಂಡ ವರ್ಷದಲ್ಲಿ ಜೊಮ್ಯಾಟೊ 1,993 ಕೋಟಿ ರೂ. ಆದಾಯ ಗಳಿಸಿದೆ. ಇದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಂಪನಿಯ ಆದಾಯದಲ್ಲಿ ಶೇ. 23.5ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಕಂಪನಿ 2,604 ಕೋಟಿ ರೂ. ಸಂಗ್ರಹಿಸಿತ್ತು.
ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಆದಾಯ ಇಳಿಕೆಯಾಗಿದ್ದರೂ ಕಂಪನಿ ನಷ್ಟವನ್ನೂ ಕಡಿಮೆ ಮಾಡಿಕೊಂಡಿದೆ. 2019-20ರಲ್ಲಿ ಕಂಪನಿ 2,362 ಕೋಟಿ ರೂ. ನಷ್ಟ ಅನುಭವಿಸಿತ್ತು, ಇದು 2020-21ರಲ್ಲಿ 822 ಕೋಟಿ ರೂ.ಗೆ ಇಳಿಕೆಯಾಗಿದೆ.

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...