ದಿವ್ಯಾ… ನಿನ್ನ ಕೈ ಹಿಡಿತೀನಿ ಎಂದ ಅರವಿಂದ್!

Date:

ಬಿಗ್‍ಬಾಸ್ ಮನೆ ಈಗ ಬಾಯ್ಸ್ ಮತ್ತು ಗರ್ಲ್ಸ್ ಹಾಸ್ಟೆಲ್‍ನಂತೆ ಕಾಣುತ್ತಿದೆ. ಬಿಗ್‍ಬಾಸ್ ನೀಡಿರುವ ಟಾಸ್ಕ್ ಅನ್ವಯ ಸ್ಪರ್ಧಿಗಳು ಆ್ಯಕ್ಟ್ ಮಾಡುತ್ತಿದಾರೆ. ಹುಡುಗರು ಹುಡುಗಿಯರಿಗೆ ರ‍್ಯಾಗಿಂಗ್ ಮಾಡುವುದು ಮತ್ತು ಹುಡುಗಿಯರಿಗೆ ಕಾಳು ಹಾಕುತ್ತಿದ್ದಾರೆ. ಪಕ್ಕಾ ಹಾಸ್ಟೆಲ್‍ನಲ್ಲಿ ಮಾಡುವ ಎಲ್ಲಾ ಕೀಟಲೆ, ತರ್ಲೆಗಳನ್ನು ಮಾಡುತ್ತಿದ್ದಾರೆ.

ಬೆಡ್ ರೂಮ್, ಲಿವಿಂಗ್ ಏರಿಯಾದಲ್ಲಿ ಹಾಸ್ಟೆಲ್‍ಗಳನ್ನು ನಿರ್ಮಿಸಲಾಗಿದೆ. ಸ್ಪರ್ಧಿಗಳು ತಮ್ಮ ಕಾಲೇಜ್, ಸ್ಕೂಲ್ ದಿನಗಳಿಗೆ ವಾಪಸ್ ಆದಂತಿದೆ. ಟಿನೇಜ್‍ನಲ್ಲಿ ಮಾಡಿರುವ ಮೋಜು, ಮಸ್ತಿಯನ್ನು ಈ ಟಾಸ್ಕ್ ನಲ್ಲಿ ಸ್ಪರ್ಧಿಗಳು ಮಾಡಲಿದ್ದಾರೆ.

ಹುಡುಗರು ಚುಡಾಯಿಸುತ್ತಿರುವಾ ಹೆಂಗಿದೆ ಮೈಗೆ ಎಂದು ವೈಷ್ಣವಿ ಅವಾಜ್ ಹಾಕಿದ್ದಾರೆ. ದಿವ್ಯಾ ಸುರೇಶ್ ಹಾಸ್ಟೆಲ್‍ಗೆ ಸೇರುವ ಹೊತ್ತಲ್ಲಿ ವಾರ್ಡನ್ ಆಗಿರುವ ನಿಧಿ ಬಳಿ ನನ್ನ ಊರು ಪಾವಗಡ ಎಂದು ಹೇಳಿದ್ದಾರೆ. ನಿಧಿ ಸುಬ್ಬಯ್ಯ ಜೋರಾಗಿ ನಕ್ಕಿದ್ದಾರೆ. ಎಲ್ಲರೂ ಈ ಟಾಸ್ಕ್ ನಲ್ಲಿ ಕಾಲೇಜಿನ ಹುಡುಗ, ಹುಡುಗಿಯರಂತೆ ವರ್ತಿಸುತ್ತಿದ್ದಾರೆ. ಈ ವಾರದ ಮೊದಲ ಟಾಸ್ಕ್ ಆಗಿರುವ ಈ ಹಾಸ್ಟೆಲ್ ಟಾಸ್ಕ್ ಮಾತ್ರ ಸಖತ್ ಮಜಾ ಕೊಡೊದಂತೂ ಖಂಡಿತಾ ಹೌದು.

ಎಲ್ಲರೂ ಟಾಸ್ಕ್ ಮೂಡ್‍ನಲ್ಲಿ ಇದ್ದರೆ ಇಲ್ಲಿ ಬಿಗ್‍ಬಾಸ್ ಮನೆಯ ಕ್ಯೂಟ್ ಜೊಡಿ ಇಬ್ಬರು ಕುಳಿತು ಮಾತನಾಡುತ್ತಿದ್ದಾರೆ. ನನಗೆ ನೀನು ಅಂದ್ರೆ ಇಷ್ಟಾ.. ಕೈ ಹಿಡಿದುಕೊಳ್ಳಲಾ ಎಂದು ಅರವಿಂದ್ ದಿವ್ಯಾಗೆ ಕೇಳಿದ್ದಾರೆ. ಈ ವೇಳೆ ದಿವ್ಯಾ ಕಿರು ನಗೆ ಬೀರುತ್ತಾ ನಮ್ಮ ಅಪ್ಪಾಜಿಯನ್ನು ಕೇಳಬೇಕು ಎಂದು ಹೇಳಿದ್ದಾರೆ. ಈ ವೇಳೆ ಇಬ್ಬರು ಜೋರಾಗಿ ನಕ್ಕಿದ್ದಾರೆ. ಖಾಸಗಿ ವಾಹಿನಿ ಹಂಚಿಕೊಂಡಿರುವ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇಷ್ಟೆಲ್ಲಾ ಫನ್ನಿ ದೃಶ್ಯಗಳು ಕಂಡು ಬಂದಿದೆ. ಇಂದು ಏನೆಲ್ಲಾ ನಡೆಯಲಿದೆ. ಯಾರು.. ಯಾರ ಬಲೆಗೆ ಬೀಳಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...