No menu items!
13 C
Munich
Monday, April 20, 2026

ಇನ್ಶುರೆನ್ಸ್ ಹಣಕ್ಕಾಗಿ ಪತ್ನಿಯನ್ನೇ ಕೊಂದ!

Must read

ಹೈದರಾಬಾದ್: ದುಶ್ಚಟಗಳಿಗೆ ದಾಸನಾಗಿದ್ದ ಪತಿ ಇನ್ಶೂರೆನ್ಸ್ ಹಣದಾಸೆಗೆ ತನ್ನ ಸಂಸಾರವನ್ನೇ ಬಲಿ ಪಡೆದಿರುವ ಘಟನೆ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ.

ಬೇಬಿ ಜಾನ್ ಕೊಲೆಯಾದ ಮಹಿಳೆ. ಆರೋಪಿ ಪತಿಯನ್ನು ದಸ್ತಗೀರ್ ಎಂದು ಗುರುತಿಸಲಾಗಿದೆ. ಈತ ಹಣಕ್ಕಾಗಿ ಪತ್ನಿಯನ್ನು ಕೊಲೆ ಮಾಡಿದ್ದು, ಮಾತ್ರವಲ್ಲದೆ ತಾನೇ ಕೊಂದೆ ಎಂದು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ.

ದುಶ್ಚಟ, ಸಾಲದಕ್ಕೆ ಪರ ಸ್ತ್ರೀ ವ್ಯಾಮೋಹ ಹೀಗೆ ಹೆಂಡತಿ, ಮಕ್ಕಳನ್ನು ಅನಾಥ ಮಾಡಿ ದೂರ ಹೋಗಿದ್ದ ದಸ್ತಗೀರ್ ಹಣಕ್ಕಾಗಿ ಮರಳಿ ಬಂದಿದ್ದ. ಹಣ ಕೊಡದೆ ಇದ್ದಾಗ ಪತ್ನಿಯ ಮೇಲೆ ಅಕ್ರಮ ಸಂಬಂಧದ ಆರೋಪವನ್ನು ಹೊರಿಸಿದ್ದನು. ಇದೀಗ ವಾಪಸ್ ಬಂದವನು ಹಣಕ್ಕಾಗಿ ತನ್ನ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article