ದೃಶ್ಯಂ ಸಿನಿಮಾದ ರೀತಿಯಲ್ಲಿ ಶವವನ್ನು ಹೂತು ಹಾಕಿದ್ದ ಪ್ರಕರಣವೊಂದನ್ನು ಒಡಿಶಾ ಪೊಲೀಸರು ಭೇದಿಸಿದ್ದಾರೆ.
ಸ್ಥಳೀಯರು ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಸುಟ್ಟು ಕರಕಲಾದ ಯುವತಿಯ ಶವವೊಂದನ್ನು ಕಾಳಿಂದಿ ಜಿಲ್ಲೆಯ ಮಹಾಲಿಂಗ್ ಸ್ಟೇಡಿಯಂನಿಂದ ಶವವನ್ನು ವಶಕ್ಕೆ ಪಡೆದಿದ್ದಾರೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ದೃಶ್ಯಂ ಸಿನಿಮಾದಲ್ಲಿಯೂ ಕಥಾನಾಯಕ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕಾಮಗಾರಿ ಹಂತದಲ್ಲಿದ್ದ ಪೊಲೀಸ್ ಠಾಣೆ ಅಡಿಯೇ ಹೂತು ಹಾಕಿರುತ್ತಾನೆ. ಇದೇ ದೃಶ್ಯಂ ಸಿನಿಮಾವನ್ನು ರೀಮೇಕ್ ಮಾಡಲಾಗುದ್ದು, ಇಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದಾರೆ. ಮೈ ಜುಮ್ಮೆನ್ನಿಸುವ ಆ ಸಿನಿಮಾ ದೃಶ್ಯ ಮಾದರಿಯಲ್ಲಿಯೇ ಅಪರಾಧ ಕೃತ್ಯಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೆಲ ದಿನಗಳಿಂದ ಮಮತಾ ಎನ್ನುವ ಶಾಲಾ ಶಿಕ್ಷಕಿಯೋರ್ವಳು ನಾಪತ್ತೆಯಾಗಿದ್ದರು. ಎಷ್ಟೇ ಪ್ರಯತ್ನ ಪಟ್ಟರು ಅವರ ಇರುವಿಕೆ ಪತ್ತೆಯಾಗಿರಲಿಲ್ಲ. ಈ ಸಂದರ್ಭ ಸ್ಟೇಡಿಯಂವೊಂದರಲ್ಲಿ ತಿಂಗಳುಗಳಿಂದ ಕಾಮಗಾರಿ ನಡೆಯುತ್ತಿತ್ತು. ಅಲ್ಲಿ ಮಮತಾ ಅವರನ್ನು ಕೊಂದು ಸ್ಟೇಡಿಯಂ ಒಳಗೆ ಮುಚ್ಚಿ ಹಾಕಿರಬಹುದು ಎಂದು ಸ್ಥಳೀಯರು ಮಾತನಾಡಿಕೊಂಡಿದ್ದರು. ಆದರೆ ಪೊಲೀಸರು ನಂಬಲಿಲ್ಲ. ಅದೇ ಸ್ಟೇಡಿಯಂ ಬಳಿ ಸ್ಲಂನಲ್ಲಿದ್ದವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಯುವತಿ ಕಾಣೆಯಾದ ದಿನ ಸ್ಟೇಡಿಯಂ ಒಳಗೆ ಬೆಂಕಿ ಜ್ವಾಲೆಗಳು ಕಂಡಿದ್ದಾಗಿ ಸ್ಲಂನಲ್ಲಿದ್ದವರು ಹೇಳಿದ್ದಾರೆ. ಆಗ ಪೊಲೀಸರು ಮಾರನೇ ದಿನವೇ ಸ್ಟೇಡಿಯಂ ಅನ್ನು ಅಗೆಸಲು ಮುಂದಾದಾಗ ಸುಟ್ಟು ಕರಕಲಾದ ಯುವತಿಯ ಶವ ಸಿಕ್ಕಿಬಿಟ್ಟಿತ್ತು.
ಇನ್ನು ಈ ಕೊಲೆಯನ್ನು ಮಮತಾ ಕೆಲಸ ಮಾಡುತ್ತಿದ್ದ ಸನ್ ಶೈನ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಗೋಬಿಂದ್ ಸಾಹು ಅವರೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಯುವತಿ ಕಾಣೆಯಾದ ರಾತ್ರಿ ಗೋಬಿಂದ್ ಕಾರು ಸ್ಟೇಡಿಯಂ ಸನಿಹ ಓಡಾಡಿರುವುದು ಪತ್ತೆಯಾಗಿದೆ.