ಒಂದಲ್ಲ ಎರಡಲ್ಲ 40 ಜನ ಎಂ ಎಲ್ ಎ ಗಳು ನಮ್ಮ ಜೊತೆ ಇದ್ದಾರೆ ಹುಷಾರ್..!?

0
303

ಕೇವಲ ಕೈ ಮುಷ್ಟಿಯಷ್ಟು ಸೀಟುಗಳನ್ನು ಇಟ್ಟುಕೊಂಡು ನೀವು ದೆಹಲಿಯ ಕನಸನ್ನು ಕಾಣುತ್ತಿದ್ದೀರಾ, ದಿದಿ ಅವರೇ ನೀವು ದೆಹಲಿಯನ್ನು ತಲುಪಲು ಆಗುವುದಿಲ್ಲ ಯಾಕಂದ್ರೆ ದೆಹಲಿ ತುಂಬಾ ದೂರ ಇದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.


ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಮೋದಿ ಬಂಗಾಳದಲ್ಲಿ ಆಡಳಿತವನ್ನು ನಡೆಸುತ್ತಿರುವ ಮಮತಾ ಬ್ಯಾನರ್ಜಿ ಸರ್ಕಾರದ 40 ಜನ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ..

ಮೇ 23ರ ಫಲಿತಾಂಶದ ನಂತರ ಅವರು ನಿಮಗೆ ಸರಿಯಾದ ಪಾಠವನ್ನು ಕಲಿಸಲಿದ್ದಾರೆ ಅವರೆಲ್ಲರೂ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೊಸ ಬಾಂಬ್ ಸಿಡಿಸಿದ್ದಾರೆ.


ಬಿಜೆಪಿಯ ದಿಗ್ವಿಜಯ ದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ನಿಮ್ಮ ಎಂ ಎಲ್ ಎ ಗಳು ನಿಮ್ಮನ್ನ ದೂರ ಇಡುತ್ತಾರೆ ಏಕೆಂದರೆ ನೀವು ಅವರ ನಂಬಿಕೆಗೆ ಮೋಸ ಮಾಡಿದ್ದೀರಿ ಇದು ನಿಮಗೆ ಮುಂದಿನ ದಿನಗಳಲ್ಲಿ ದೊಡ್ಡ ಸಂಕಷ್ಟ ಆಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.


ಇದಲ್ಲದೆ ಪಶ್ಚಿಮ ಬಂಗಾಳದಲ್ಲಿ ಇಂದು ನಡೆದ ಗಲಭೆಯ ವಿಚಾರವನ್ನು ಪ್ರಸ್ತಾಪಿಸಿದ ಮೋದಿ ನೀವು ನಿಮ್ಮ ಕಾರ್ಯಕರ್ತರು ಮತ್ತು ನಿಮ್ಮ ಗೂಂಡಾಗಳು ಎಷ್ಟು ಬೇಕಾದರೂ ಹಿಂಸಾಚಾರವನ್ನು ನಡೆಸಿ ಆದರೆ ಪಶ್ಚಿಮ ಬಂಗಾಳದ ಜನ ಈಗಾಗಲೇ ನಿರ್ಧಾರವನ್ನು ಮಾಡಿ ಆಗಿದೆ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನ ಪಶ್ಚಿಮ ಬಂಗಾಳದ ಜನ ಸೋಲಿಸುವುದು ಈಗಾಗಲೇ ಕನ್ಫರ್ಮ್ ಆಗಿದೆ..

ಯಾಕಂದ್ರೆ ಮಮತಾ ಬ್ಯಾನರ್ಜಿ ಎಲ್ಲಾ ಮಿತಿಗಳನ್ನು ಈಗಾಗಲೇ ಮೀರಿದ್ದಾರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಿಸುತ್ತಿದ್ದಾರೆ, ಜೊತೆಗೆ ಗೂಂಡಾಗಳನ್ನು ಬಿಟ್ಟು ಬಿಜೆಪಿ ನಾಯಕರು ಪ್ರಚಾರ ಮಾಡದಂತೆ ತಡೆಯುತ್ತಿದ್ದಾರೆ ಎಂದು ದಿದಿ ವಿರುದ್ಧ ಟೀಕಾ ಪ್ರಹಾರವನ್ನು ಹರಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

LEAVE A REPLY

Please enter your comment!
Please enter your name here