ಮುಂಬೈ ಬಂದ್ರಾ ಪ್ರದೇಶದಲ್ಲಿರುವ ಮುಸ್ಕಾನ್ ಫೌಂಡೇಶನ್‍ನ ವಿಕಲ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಹುಲ್ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆದಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ತೆಗೆದುಕೊಂಡಿದ್ದ ಫೋಟೋಗಳನ್ನು ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ರಾಹುಲ್ ಪಂದ್ಯದ ಬಳಿಕ ಸಿಕ್ಕ ಬಿಡುವಿನ ಅವಧಿಯಲ್ಲಿ ವಿಕಲ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ಸಮಯ ಕಳೆದಿದ್ದಾರೆ.
ಕೆಎಲ್ ರಾಹುಲ್ ಅವರು ಮಕ್ಕಳನ್ನು ಭೇಟಿಯಾಗಿದ್ದು ಸ್ಟಾರ್ ಕ್ರಿಕೇಟಿಗನ ಈ ನಡೆ ಎಲ್ಲರಲ್ಲೂ ಖುಷಿ ತಂದಿದೆ .ಮಕ್ಕಳು ರಾಹುಲ್ ಅವರೋಡನೆ ಸಂತೋಶದಿಂದ ಕಾಲ ಕಳೆದರು.
ರಾಹುಲ್ ಭೇಟಿಯಿಂದ ಮಕ್ಕಳು ಅಚ್ಚರಿಗೊಂಡಿದ್ದರು. ಇದನ್ನಷ್ಟೇ ನಾವು ಸ್ಟಾರ್ ಗಳಿಂದ ನಿರೀಕ್ಷೆ ಮಾಡುತ್ತೇವೆ. ಅವರಿಗೆ ಧನ್ಯವಾದ ಎಂದು ಸಂಸ್ಥೆ ಪೋಸ್ಟ್ ನಲ್ಲಿ ತಿಳಿಸಿದೆ.