ಕೆ.ಆರ್.ಪೇಟೆಯ ಅನರ್ಹ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣಗೌಡ ಅವರು ದೇವೇಗೌಡರ ಕುಟುಂಬ ದೇಶಕ್ಕೆ ಕೊಡುಗೆ ಏನು ಕೊಟ್ಟಿಲ್ಲ. ಕುಟುಂಬಕ್ಕಷ್ಟೇ ಸೀಮಿತ ಎಂದು ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೆ.ಆರ್.ಪೇಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಜೆಡಿಎಸ್ ನಾಯಕರುಗಳು ಮೊನ್ನೆ ತುಂಬಾ ಹೀನಾಯವಾಗಿ ಮಾತನಾಡಿ ಹೋಗಿದ್ದಾರೆ. ಕಳೆದ ಐದು ವರ್ಷದಿಂದ ಇವರ ಕುಟುಂಬ ಹಾಗು ದೇವೇಗೌಡರ ಹೆಣ್ಣು ಮಕ್ಕಳು ಮಾನಸಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿದರು.