ಲೋಕಸಭೆ ಚುನಾವಣೆಯಲ್ಲಿನ ಸೋಲು, ದೋಸ್ತಿ ಕಾಂಗ್ರೆಸ್ ಮುಖಂಡರ ಚುಚ್ಚು ಮಾತುಗಳು ಹಾಗೂ ಸಮ್ಮಿಶ್ರ ಸರ್ಕಾರದ ಗೊಂದಲ ಇವೇ ಮೊದಲಾದ ಕಾರಣಗಳಿಂದ ಕೆಂಡಾಮಂಡಲರಾಗಿರುವ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಪಕ್ಷ ಸಂಘಟನೆಗೆ 6000 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ.

ಜೆಡಿಎಸ್ ವತಿಯಿಂದ ಎರಡು ಹಂತದಲ್ಲಿ ಪಾದ ಯಾತ್ರೆ ಕೈಗೊಳ್ಳಲಾಗಿದೆ. ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ಜೆಡಿಎಸ್ ಪಾದಯಾತ್ರೆ ಕೈಗೊಂಡಿದೆ ಎನ್ನಲಾಗಿದೆ. ಪಾದಯಾತ್ರೆಯಿಂದ ಆಗುವ ಪರಿಣಾಮಗಳ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದು, ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದಾರೆ.

ಜೆಡಿಎಸ್ ಪಾದಯಾತ್ರೆಗೆ ಪ್ರತಿಯಾಗಿ ರಾಜಕೀಯ ದಾಳ ಉರುಳಿಸಲು ಸಿದ್ದರಾಮಯ್ಯ ಸಜ್ಜಾಗಿದ್ದು, ಅಹಿಂದ ಸಂಘಟನೆಗೆ ಮತ್ತೆ ಚೈತನ್ಯ ನೀಡಲಿದ್ದಾರೆ.ದೇವೇಗೌಡರ ಪಾದಯಾತ್ರೆಗೆ ಪ್ರತಿಯಾಗಿ ಸಿದ್ದರಾಮಯ್ಯ ಅಹಿಂದ ಸಮಾವೇಶಗಳನ್ನು ನಡೆಸಲಿದ್ದಾರೆ. ಇದಕ್ಕಾಗಿಯೇ ಹೊಸ ತಂಡವನ್ನು ಸಿದ್ದರಾಮಯ್ಯ ರೆಡಿ ಮಾಡಿಕೊಳ್ಳ ತೊಡಗಿದ್ದಾರೆ ಎನ್ನಲಾಗಿದೆ. ಈ ಬಾರಿ ಸಿದ್ದರಾಮಯ್ಯನವರ ಟೀಂನಲ್ಲಿ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವರಾದ ಹೆಚ್. ಆಂಜನೇಯ, ಪಿ.ಎಂ. ನರೇಂದ್ರಸ್ವಾಮಿ, ಶಾಸಕರಾದ ಬೈರತಿ ಸುರೇಶ್ ಮತ್ತು ಬೈರತಿ ಬಸವರಾಜ್ ಸೇರಿದಂತೆ ಹಲವರು ಇರಲಿದ್ದಾರೆ ಎಂದು ಹೇಳಲಾಗಿದೆ.






