ರಾಹುಲ್ ಗಾಂಧಿ ಅವರು ಕೆಲವು ದಿನಗಳ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಹಲವಾರು ಹೇಳಿಕೆಗಳನ್ನು ಕೊಟ್ಟುಕೊಂಡು ಬಂದಿದ್ದಾರೆ ಆದರೆ ಇದೀಗ ಮತ್ತೆ ಅವರು ದೇಶದಲ್ಲಿ ಹಿಂಸಾಚಾರ ಹೆಚ್ಚಿರುವುದು, ಮಹಿಳೆಯರ ವಿರುದ್ಧದ ಅಪರಾಧ ಹೆಚ್ಚಾಗಿರುವುದು, ಕಾನೂನಿಗೆ ಬೆಲೆಯಿಲ್ಲದ ಪರಿಸ್ಥಿತಿ ಇದ್ದು ಮಹಿಳೆಯರಿಗೆ ಭದ್ರತೆಯೇ ಇಲ್ಲ ಎಂಬಂತಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಹೆಚ್ಚುತ್ತಿದ್ದು ಅವರ ವಿರುದ್ಧ ದ್ವೇಷಭಾವನೆ ಹರಡಲಾಗುತ್ತಿದೆ. ದಲಿತರನ್ನು ಥಳಿಸಿ ಅವರ ಕೈಗಳನ್ನು ಮುರಿಯುವ ಘಟನೆ ನಡೆಯುತ್ತಿದೆ. ಆದಿವಾಸಿಗಳ ಜಮೀನನ್ನು ಅವರಿಂದ ಕಿತ್ತುಕೊಂಡು ಅವರ ಮೇಲೆ ದೌರ್ಜನ್ಯ ಎಸಗುವ ಘಟನೆಗಳೂ ಕೇಳಿ ಬರ್ತಾ ಇದೆ ಇದೆಲ್ಲಾ ಇದೆಲ್ಲ ಘಟನೆಗಳನ್ನು ತಡೆಯುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ಅವರು ಟೀಕೆ ಮಾಡಿದ್ದಾರೆ .