ದೇಶದ ಮೊದಲ ಕೊರೋನಾ ಲಸಿಕೆಗೆ ಡಿಸಿಜಿಐ ಒಪ್ಪಿಗೆ

1
42

ಹೊಸದಿಲ್ಲಿ: ಆಶಾದಾಯಕ ಬೆಳವಣಿಗೆಯೊಂದರಲ್ಲಿ ದೇಶದ ಮೊಟ್ಟ ಮೊದಲ ಕೊರೊನಾ ವೈರಸ್ ಲಸಿಕೆಗೆ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ.

ಆಕ್ಸ್‌ಫರ್ಡ್‌-ಆಸ್ಟ್ರಾಜೆನಿಕಾ ಕೊರೊನಾ ಲಸಿಕೆ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್‌ ಲಸಿಕೆಗಳ ಸಾರ್ವತ್ರಿಕ ಬಳಕೆಗೆ ಅನುಮತಿ ನೀಡಿರುವ ಡಿಸಿಜಿಐ, ಶೀಘ್ರದಲ್ಲೇ ಈ ಲಸಿಕೆ ಹಂಚಿಕೆ ಹಾಗೂ ವಿತರಣೆಗೆ ಮುಂದಡಿ ಇಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಎರಡೂ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದೂ ಡಿಸಿಜಿಐ ತಿಳಿಸಿದೆ.

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಡಿಸಿಜಿಐ, ಕೇಂದ್ರ ತಜ್ಞ ಸಮಿತಿ ಶಿಫಾರಸುಗಳನ್ನು ಒಪ್ಪಿಕೊಳ್ಳಲಾಗಿದೆ ಎಂದಿದೆ.

ಕೇಂದ್ರ ತಜ್ಞ ಸಮಿತಿ ಶಿಫಾರಸಿನ ಅನ್ವಯ ನಾವು ಆಕ್ಸ್‌ಫರ್ಡ್‌-ಆಸ್ಟ್ರಾಜೆನಿಕಾ ಹಾಗೂ ಕೋವ್ಯಾಕ್ಸಿನ್‌ ಕೊರೊನಾ ಲಸಿಕೆಗೆ ಅನುಮತಿ ನೀಡಿದ್ದು, ಸರ್ಕಾರ ಈಗಾಗಲೇ ಇವುಗಳ ಹಂಚಿಕೆ ಹಾಗೂ ವಿತರಣೆಗೆ ಕ್ರಮ ಕೈಗೊಂಡಿದೆ ಎಂದು ಡಿಸಿಜಿಐ ಮುಖ್ಯಸ್ಥರು ಹೇಳಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಭಾರತದ ಸುದೀರ್ಘ ಹೋರಾಟ ಮಹತ್ವದ ಘಟ್ಟ ತಲುಪಿದ್ದು, ಕೊರೊನಾ ಲಸಿಕೆ ಸಾರ್ವತ್ರಿಕ ಬಳಕೆ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಡಿಸಿಜಿಐ ಬಣ್ಣಿಸಿದೆ.

ಹಲವು ಹಂತಗಳಲ್ಲಿ ಕೊರೊನಾ ಲಸಿಕೆಯನ್ನು ಜನರಿಗೆ ನೀಡಲಾಗುವುದು ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದ್ದು, ಈ ಹಂತಗಳ ಪರಿಣಾಮಕಾರಿ ಜಾರಿ ಸರ್ಕಾರದ ಜವಾಬ್ದಾರಿ ಎಂದು ಡಿಸಿಜಿಐ ಹೇಳಿದೆ.

ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಆರಂಭವಾದ ಮೇಲೆ, ಇದೇ ಮೊದಲ ಬಾರಿಗೆ ಲಸಿಕೆಯೊಂದಕ್ಕೆ ಸಾರ್ವತ್ರಿಕ ಬಳಕೆಯ ಅನುಮತಿ ನೀಡಲಾಗಿದೆ. ಹಲವು ಸುತ್ತಿನ ಕಠಿಣ ಪರೀಕ್ಷೆ ಬಳಿಕ ಈ ಲಸಿಕೆಯ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಡಿಸಿಜಿಐ ಸ್ಪಷ್ಟಪಡಿಸಿದೆ.

ಸೌರವ್ ಗಂಗೂಲಿಗೆ ಹೃದಯಾಘಾತ! ಈಗ ಹೇಗಿದ್ದಾರೆ? ಅಭಿಮಾನಿಗಳಲ್ಲಿ ಆತಂಕ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಆಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಸ್ತುತ, ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಇನ್ನೂ 24 ಗಂಟೆಗಳ ಕಾಲ ವೈದ್ಯರ ಮೇಲ್ವಿಚಾರಣೆಯಲ್ಲಿರಲಿದ್ದಾರೆ. ಗಂಗೂಲಿ ಅವರರನ್ನು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಕ್ರಿಕೆಟ್ ಜಗತ್ತು ಗೊಂದಲದಲ್ಲಿದೆ.

ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಹಲವು ಪ್ರಮುಖ ವ್ಯಕ್ತಿಗಳು, ಅಭಿಮಾನಿಗಳು ಹಾಗೂ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಶಿಸುತ್ತಿದ್ದಾರೆ.ಸೌರವ್ ಗಂಗೂಲಿ ಅವರಿಗೆ ಶನಿವಾರ ಹೃದಯಾಘಾತ ಸಂಭವಿಸಿದ ಕಾರಣ ಅವರನ್ನ ಕೋಲ್ಕತ್ತಾದ ವುಡ್​ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಗೂಲಿ ಅವರಿಗೆ ಪ್ರಸ್ತುತ ಆಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವುಡ್‌ಲ್ಯಾಂಡ್‌ ಆಸ್ಪತ್ರೆಯ ವೈದ್ಯ ಡಾ. ಅಫ್ತಾಬ್‌ ಖಾನ್ ಅವರು, ‘ಸದ್ಯ ಗಂಗೂಲಿ ಅವರ ಆರೋಗ್ಯದ ಕುರಿತು 24 ಗಂಟೆಗಳ ಕಾಲ ನಿಗಾವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

1 COMMENT

LEAVE A REPLY

Please enter your comment!
Please enter your name here