ದೇಶದ ಹಲವಾರು ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ!

0
53

ದೇಶದ 63 ಎಂಜಿನಿಯರಿಂಗ್ ಸಂಸ್ಥೆಗಳು ಮುಚ್ಚಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.  ಕಳೆದ 10 ವರ್ಷಗಳಲ್ಲೇ ಅತಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪ್ರವೇಶ ಪಡೆದಿದ್ದಾರೆ. 2015-16ರಿಂದ ಎಂಜಿನಿಯರಿಂಗ್ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಹಲವು ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಅರ್ಜಿ ಸಲ್ಲಿಸುತ್ತಿದ್ದಾರೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಇತ್ತೀಚಿನ ಮಾಹಿತಿಯ ಪ್ರಕಾರ ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಹಂತಗಳಲ್ಲಿ ಎಂಜಿನಿಯರಿಂಗ್ ಸೀಟುಗಳು 23.28 ಲಕ್ಷಕ್ಕೆ ಇಳಿದಿದೆ.

ಇದು ಕನಿಷ್ಠ 10 ವರ್ಷಗಳಲ್ಲೇ ಅತ್ಯಂತ ಕಡಿಮೆ. 2014-15ರಲ್ಲಿ ಎಲ್ಲಾ ಎಐಸಿಟಿಇ ಅನುಮೋದಿತ ಸಂಸ್ಥೆಗಳಲ್ಲಿ 32 ಲಕ್ಷ ಸೀಟುಗಳಿತ್ತು. ಕಡಿಮೆ ಬೇಡಿಕೆಯ ಕಾಲೇಜುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

2015-16ನೇ ಸಾಲಿನಲ್ಲಿ ಕನಿಷ್ಠ 50 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲಾಗಿದೆ. ಈ ಷರ್ವ 63 ಕಾಲೇಜುಗಳನ್ನು ಮುಚ್ಚಲು ಅನುಮತಿ ಪಡೆಯಲಾಗಿದೆ. 2021-22ರ ಶೈಕ್ಷಣಿಕ ವರ್ಷಕ್ಕೆ ಎಐಸಿಟಿಇ 54 ಹೊಸ ಸಂಸ್ಥೆಗಳಿಗೆ ಅನುಮೋದನೆ ನೀಡಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಸಹಾಯವಾಗಿದೆ. 2017-18, 2018-19, ಮತ್ತು 2019-20 ರಲ್ಲಿ 143, 458, ಮತ್ತು 153 ಹೊಸ ಸಂಸ್ಥೆಗಳಿಗೆ ಅನುಮೋದನೆ ನೀಡಲಾಗಿದೆ. 2016-17ರಲ್ಲಿ 3,291 ಕಾಲೇಜುಗಳಲ್ಲಿ ಶೇ.51ರಷ್ಟು ಎಂಜಿನಿಯರಿಂಗ್ ಸೀಟುಗಳು ಖಾಲಿ ಇದ್ದವು.

LEAVE A REPLY

Please enter your comment!
Please enter your name here