No menu items!
11.1 C
Munich
Wednesday, April 29, 2026

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿರಾಸೆ ಮೂಡಿಸಿದ ಅರವಿಂದ್ – ಅರ್ಜುನ್

Must read

ಭಾರತೀಯ ಬಿಲ್ಗಾರರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಈ ಹಿಂದೆ ನಡೆದ ಪುರುಷ – ಮಹಿಳಾ ಮಿಶ್ರಿತ ಆರ್ಚರಿ ತಂಡ ಕೂಡ ಸೋತಿತ್ತು, ಮೂವರು ಪುರುಷರ ಆರ್ಚರಿ ತಂಡ ಕೂಡ ಗ್ರೂಪ್ ಹಂತದಲ್ಲಿಯೇ ಸೋಲುವುದರ ಮೂಲಕ ನಿರಾಸೆ ಮೂಡಿಸಿತ್ತು. ಇದೀಗ ಆರ್ಚರಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿಯೂ ಹಿರಿಯ ಬಿಲ್ಲುಗಾರ ತರುಣ್ ದೀಪ್ ರೈ ನಿರಾಸೆ ಮೂಡಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್ ಆರ್ಚರಿ ವಿಭಾಗದಲ್ಲಿ ಮೊದಲನೇ ಪಂದ್ಯವನ್ನು ಉಕ್ರೇನ್ ತಂಡದ ಬಿಲ್ಗಾರನ ವಿರುದ್ಧ ಭಾರತದ ತರುಣ್ ದೀಪ್ ರೈ 6-4 ಅಂತರದಲ್ಲಿ ಜಯ ಸಾಧಿಸಿ ಎರಡನೇ ಹಂತಕ್ಕೆ ಲಗ್ಗೆ ಇಟ್ಟಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಇಟಲಿಯ ಬಿಲ್ಲುಗಾರ ಶ್ಯಾನಿ ವಿರುದ್ಧ ತರುಣ್ ದೀಪ್ ರೈ 4-6 ಅಂತರದಲ್ಲಿ ಸೋಲನುಭವಿಸಿದ್ದಾರೆ.


ಹೀಗೆ ಇಟಲಿಯ ಶ್ಯಾನಿ ವಿರುದ್ಧ ಎರಡನೇ ಪಂದ್ಯದಲ್ಲಿ ಸೋತ ಭಾರತದ ಬಿಲ್ಲುಗಾರ ತರುಣ್ ದೀಪ್ ರೈ 16 ಸ್ಪರ್ಧಿಗಳ ಎಲಿಮಿನೇಷನ್ ಸುತ್ತಿನಲ್ಲಿ ಹೊರಬಿದ್ದಿದ್ದಾರೆ. ಅತ್ತ ಮಹಿಳಾ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಆಟಗಾರ್ತಿ ಪಿವಿ ಸಿಂಧು ಹಾಂಗ್‌ಕಾಂಗ್‌ ವಿರುದ್ಧ ಗೆದ್ದು 16ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article