ದೇಶಾಭಿಮಾನ ಮೆರೆವ ಹೇಳು ವಂದೆ ಮಾತರಂ..

Date:

ಕನ್ನಡದಲ್ಲಿ ದೇಶಭಕ್ತಿ ಕುರಿತಂತೆ ಸಾಕಷ್ಟು ಹಾಡುಗಳು ಬಂದಿವೆ. ದೇಶಾಭಿಮಾನ ಹೆಚ್ಚಿಸುವ ಗೀತೆಗಳಿಗಂತೂ ಲೆಕ್ಕವಿಲ್ಲ. ಆ ಸಾಲಿಗೆ ಈಗ ಮತ್ತೊಂದು ಹಾಡು ಸೇರ್ಪಡೆಯಾಗಿದೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿಯೇ ತಯಾರಾಗಿರುವ ಈ ಹಾಡಿಗೆ ಎಲ್ಲೆಡೆ ಮೆಚ್ಚುಗೆ ಸಿಗುತ್ತಿದೆ. ಸಂಗೀತ ನಿರ್ದೇಶಕ ಎಸ್. ಪ್ರದೀಪ್ ವರ್ಮ ಸಂಗೀತ ಸಂಯೋಜಿಸಿರುವ ‘ಹೇ ಹೇಳು ದೇಶ ಪ್ರೇಮಿಯೇ ವಂದೇ ಮಾತರಂ ನಮ್ಮ ಕೂಗು..’ ಎಂಬ ದೇಶದ ಹೆಮ್ಮೆ ಎನಿಸುವ ಹಾಡು ಇದೀಗ ಬಿಡುಗಡೆಗೊಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

ಈ ವಿಡಿಯೋ ಹಾಡಿನಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ‌ ಶ್ರೀಮುರಳಿ, ಅನಿರುಧ್, ನಟಿಯರಾದ ಪಾರುಲ್ ಯಾದವ್, ನೀತುಶೆಟ್ಟಿ , ಅದ್ವಿತಿ ಶೆಟ್ಟಿ, ಸಂಗೀತ ನಿರ್ದೇಶಕ ವಿ.ಮನೋಹರ್, ನಿರ್ದೇಶಕ ನಾಗೇಂದ್ರ ಅರಸ್, ನಟ ಯತಿರಾಜ್ ಸೇರಿದಂತೆ ಇತರೆ ಸಿನಿ ತಾರೆಯರು ಕಾಣಿಸಿಕೊಂಡು ದೇಶಾಭಿಮಾನ ತೋರಿದ್ದಾರೆ.

ವಿಜಯ್ ಭರಮಸಾಗರ ಸಾಹಿತ್ಯ ಬರೆದಿರುವ ಹಾಡು ಇದಾಗಿದ್ದು, ನಮ್ಮ‌ದೇಶದ ಯೋಧರಿಗೆ ಹಾಗೂ ರೈತರಿಗೆ ಈ ಹಾಡನ್ನು ಅರ್ಪಿಸಲಾಗಿದೆ. ಸಂಗೀತ ನಿರ್ದೇಶಕ ಎಸ್.ಪ್ರದೀಪ್ ವರ್ಮ ಅವರ ನಿರ್ದೇಶನ ಈ ಹಾಡಿಗಿದೆ.‌ಈ ಹಾಡಿಗೆ ಆರ್.ಜೆ. ರ‍್ಯಾಪಿಡ್ ರಶ್ಮಿ, ಸಂತೋಷ್‌ ವೆಂಕಿ, ಇಂದು‌ ನಾಗರಾಜ್, ವೇದಶ್ರೀ , ಸುಗುಣ ಮೂರ್ತಿ , ಪ್ರದೀಪ್ ವರ್ಮ ಇತರರು ಧ್ವನಿಯಾಗಿದ್ದಾರೆ.

ನಾಲ್ಕು ನಿಮಿಷದ ಈ ಹಾಡನ್ನು ಸ್ವಾತಂತ್ರ್ಯೋತ್ಸವಕ್ಕಾಗಿಯೇ ನಿರ್ಮಿಸಲಾಗಿದ್ದು,
ಈ ವಿಡಿಯೋ ಆಲ್ಬಂ ಗೆ ಚಿತ್ರರಂಗದ ಅನೇಕರು ಪ್ರೋತ್ಸಾಹಿಸಿದ್ದಾರೆ. ಕಿರಣ್ ಛಾಯಾಗ್ರಹಣ ಹಾಗೂ ಸಂಕಲನವಿದೆ. ಎಸ್ ಪಿ ವಿ ಸ್ಟುಡಿಯೋ ಮೂಲಕ ಹಾಡು ತಯಾರಾಗಿದೆ. ಜಗದೀಶ್ ವೆಂಕಿ‌ ಅವರು ಆಲ್ಬಂ ಕ್ರಿಯೇಟಿವ್ ಹೆಡ್ ಆಗಿ‌ ಕಾರ್ಯ ನಿರ್ವಹಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ.. ಸಾಂಸ್ಕೃತಿಕ ನಗರಿಯ ಸುಬ್ಬರಾಯನ ಕೆರೆಯ ಇತಿಹಾಸ..

74ನೇ ಸ್ವಾತಂತ್ರ್ಯ ದಿನಾಚರಣೆ : ಮೋದಿ ಭಾಷಣದ ಮುಖ್ಯಾಂಶಗಳು…

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಸ್ತ್ ಎತ್ತಿನಗಾಡಿ ಸವಾರಿ ..!

ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವನೆ ಎಷ್ಟು ಆರೋಗ್ಯಕರ ಗೊತ್ತೆ..

ರಿಯಲ್ ಸ್ಟಾರ್ ಉಪ್ಪಿ ಅಣ್ಣನ ಮಗ ಸದ್ದಿಲ್ಲದೆ ‘ ಸೂಪರ್ ಸ್ಟಾರ್’ ..!

ಪ್ರಪಂಚ ಎಷ್ಟೊಂದು ವಿಸ್ಮಯಗಳ ಆಗರ..! ಇಲ್ಲೆಲ್ಲಾ ಒಂದ್ಸಲ ಆದ್ರೂ ಸುತ್ಬೇಕು ರೀ…!

ಕಿಚ್ಚನ ‘ಫ್ಯಾಂಟಮ್’ ನ‌ ‘ಗಾಂಭೀರ’ ಪಾತ್ರ ರಿವೀಲ್ ..!

 

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...