ದೊಡ್ಡ ಕಟ್ಟಡಗಳಲ್ಲಿ ಮಳೆ ನೀರಿನ ಕೊಯ್ಲು ಕಡ್ಡಾಯ!

Date:

ಮಳೆ ನೀರನ್ನು ಸದ್ಬಳಕೆ ಮಾಡುವ ದೃಷ್ಟಿಯಿಂದ ಈಗಿರುವ ಕಾನೂನನ್ನು ರಾಜ್ಯ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಈ ಸಂಬಂಧ ಸದನದಲ್ಲಿ ಗುರುವಾರ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ವಿಧೇಯಕ ವನ್ನು ಅಂಗೀಸಲಾಗಿತ್ತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಅಂಗೀಕರಿಸುವಂತೆ ಕೋರಿ ಸದನದ ಒಪ್ಪಿಗೆ ಪಡೆದುಕೊಂಡರು.

ಮಳೆ ನೀರು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಇರುವ ಕಾನೂನನ್ನು ರಾಜ್ಯ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದ್ದು, ಈ ಕುರಿತ ವಿಧೇಯಕವೊಂದು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಈಗಾಗಲೇ ನಗರದಲ್ಲಿ ಮಳೆ ನೀರು ಕೊಯ್ಡು ಕಡ್ಡಾಯವಾಗಿದೆ. ಆದರೂ ಬಹಳಷ್ಟು ಮಂದಿ ನಿರ್ಮಿಸಿಕೊಂಡಿಲ್ಲ. ಇದು ಭವಿಷ್ಯದಲ್ಲಿ ನೀರಿನ ಅಭಾವ ಎದುರಿಸುವ ಸಾಧ್ಯತೆ ಹೆಚ್ಚಿದೆ.

ಹೀಗಾಗಿ ರಾಜ್ಯ ಸರ್ಕಾರ ರಾಜಧಾನಿ ಬೆಂಗಳೂರಿನಲ್ಲಿ 30*40 ಮತ್ತು ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸಲ್ಪಟ್ಟ ಕಟ್ಟಡದಲ್ಲಿ ಮಳೆ ನೀರು ಕೊಯ್ದು ಕಡ್ಡಾಯವಾಗಿರಬೇಕು, 40*60 ಹಾಗೂ ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸುವ ಕಟ್ಟಡದಲ್ಲಿ ಎರಡು ಪೈಪ್ ಗಳನ್ನು ಕಡ್ಡಾಯಗೊಳಿಸಿದೆ.

ಅಲ್ಲದೆ, 40*60 ಮತ್ತು ಅದಕ್ಕಿಂತ ಮೇಲ್ಪಟ್ಟ ನಿವೇಶನದಲ್ಲಿ ನಿರ್ಮಿಸಿುವ ಕಟ್ಟಡದಲ್ಲಿ ಎರಡು ಪೈಪ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಿಳಿಸಿದೆ.

 

ಒಂದು ಪೈಪ್ ಸಂಗ್ರಹಣೆ ಮತ್ತು ಮತ್ತೊಂದು ಪೈಪ್ ಬಳಕೆಯ ದೃಷ್ಟಿಯಿಂದಾಗಿದೆ. ಸಂಗ್ರ ಮಾಡುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರವಾಲಿದೆ.
216 ಚದರ ಮೀಟರ್ ಗಳಿಗಿಂತ ಕಡಿಮೆ ಇರದ ಮತ್ತು 1000 ಚದರ ಮೀಟರ್ ಗಿಂತ ಹೆಚ್ಚಲ್ಲದ ನಿವೇಶನ ಪ್ರದೇಶದಲ್ಲಿ ಕಟ್ಟಡವನ್ನು ಹೊಂದಿರುವವರು ಮಳೆ ನೀರು ಕೊಯ್ಡು ಕಡ್ಡಾಯಗೊಳಿಸಬೇಕು.

 

 

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...