ರಾಜ್ಯ ಮಟ್ಟದ ತೋಟಗಾರಿಕಾ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೋಟಗಾರಿಕಾ ಇಲಾಖಾ ಒಂದು ಹೃದಯವಿದ್ದಂತೆ. ಹೃದಯವನ್ನೇ ಕಸಿದುಕೊಂಡರೇ ಹೇಗೆ ಎಂಬ ಪ್ರಶ್ನೆ ಉದ್ಬವ ಮಾಡಿದೆ ಎಂದರು.
ರಾಜ್ಯ ಸರ್ಕಾರದಿಂದ ನೂತನವಾಗಿ ಅನುಷ್ಠಾನಗೊಂಡಿರುವ ಅಂತರಗಂಗೆ ನಿಗಮ ಮಂಡಳಿಗೆ, ರೇಷ್ಮೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಹಲವು ಯೋಜನೆಗಳನ್ನು ಸೇರ್ಪಡೆ ಮಾಡಿ ನಿಗಮಕ್ಕೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಈ ಸರ್ಕಾರದ ಕ್ರಮ ಸರಿ ಇಲ್ಲ. ಯಾವುದೇ ಕಾರಣಕ್ಕೂ ಅಂತರಗಂಗೆ ನಿಗಮ ಮಂಡಳಿಗೆ ತಮ್ಮ ಇಲಾಖೆ ಯೋಜನೆಗಳನ್ನು ಸೇರಿಸಲು ಬಿಡುವುದಿಲ್ಲ ಎಂದು ಸ್ವತಃ ಸರ್ಕಾರದ ವಿರುದ್ಧವೇ ಸಚಿವರು ಮಾತನಾಡಿದ್ದಾರೆ.