ದ. ಆಫ್ರಿಕಾದಲ್ಲಿ ಕೊವಿಡ್ 4ನೇ ಅಲೆ ಶುರು

0
70

ಒಮೈಕ್ರಾನ್ ವೈರಸ್​ ಮೊದಲು ಕಾಣಿಸಿಕೊಂಡ ದಕ್ಷಿಣ ಆಫ್ರಿಕಾ ಈಗ ಕೊರೋನಾದ ನಾಲ್ಕನೇ ಅಲೆಗೆ ಎಂಟರ್​ ಆಗ್ತಿದೆ ಅಂತ ಅಲ್ಲಿನ ಆರೋಗ್ಯ ಸಚಿವ ಜೋ ಫಾಲಾ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಸೋಮವಾರ ಎರಡು ಸಾವಿರ ಕೊರೋನಾ ಕೇಸ್​ ದೃಢಪಟ್ಟಿತ್ತು, ಮಂಗಳವಾರ ಇದು ಡಬಲ್​ ಆಗಿ 4 ಸಾವಿರ ಆಗಿತ್ತು, ಬುಧವಾರ 8 ಸಾವಿರ ದಾಟಿತ್ತು, ಗುರುವಾರ 11 ಸಾವಿರ ದಾಟಿ ಹೋಗಿದೆ.

ಕಳೆದ ಒಂದು ವಾರದಲ್ಲಿ ಸೌತ್​ ಆಫ್ರಿಕಾದ ಕೊರೋನಾ ಕೇಸಸ್ 300 ಪರ್ಸೆಂಟ್​ ಹೆಚ್ಚಾಗಿದೆ. ಇನ್ನು ವರ್ಚುವಲ್​ ಮೀಡಿಯಾ ಬ್ರೀಫಿಂಗ್​ ವೇಳೆ ಮಾತನಾಡಿದ ಜೋ ಫಾಲಾ, ದೇಶದ ಎಲ್ಲಾ ಭಾಗದಿಂದ ಹೆಚ್ಚೆಚ್ಚು ಕೊರೋನಾ ಕೇಸಸ್​ ವರದಿಯಾಗ್ತಿದೆ. ಈ ಒಮೈಕ್ರಾನ್​ ರೂಪಾಂತರಿ ಹರಡುವ ವೇಗ ತುಂಬಾ ಜಾಸ್ತಿ ಇದೆ. ಆಲ್ರೆಡಿ ಲಸಿಕೆ ಹಾಕ್ಕೊಂಡೋರಿಗೂ ತಗುಲುತ್ತಿದೆ. ಹೀಗಿದ್ದರೂ ಗಂಭೀರ ಪ್ರಮಾಣದ ಸಮಸ್ಯೆ ಮತ್ತು ಸಾವನ್ನ ತಡೆಯೋ ಶಕ್ತಿ ಲಸಿಕೆಗೆ ಇರೋದ್ರಿಂದ ಎಲ್ಲರೂ ಮುಂದೆ ಬಂದು ಲಸಿಕೆ ಹಾಕ್ಕೋಬೇಕು ಅಂತ ಅವರು ಆಗ್ರಹಿಸಿದ್ರು. ಇನ್ನು ಸೌತ್​ ಆಫ್ರಿಕಾ ಮೇಲೆ ನಾನಾ ದೇಶಗಳು ನಿರ್ಬಂಧ ಹಾಕಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಇದು ವಿನಾಶಕಾರಿ ಮಾರ್ಗ, ಅಂತಾರಾಷ್ಟ್ರೀಯ ಸಹಕಾರವನ್ನ ದುರ್ಬಲ ಮಾಡುತ್ತೆ ಅಂತ ಹೇಳಿದ್ರು.

LEAVE A REPLY

Please enter your comment!
Please enter your name here