ದ.ಆಫ್ರಿಕಾದಲ್ಲಿ ಮಕ್ಕಳಲ್ಲಿಯೇ ಒಮಿಕ್ರಾನ್ ಅಟ್ಟಹಾಸ

1
35

ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಒಮಿಕ್ರಾನ್‌ ಹವಾಳಿ ಶುರುವಾಗಿದೆ. ಆದ್ರೆ, ದಕ್ಷಿಣ ಆಪ್ರಿಕಾದಲ್ಲಿ ಒಮಿಕ್ರಾನ್ ಅಕ್ಷರಶಃ ಅಟ್ಟಹಾಸ ಮೆರೆಯುತ್ತಿದ್ದು,‌ ಮುಗ್ಧ ಮಕ್ಕಳ ಮೇಲೆ ತನ್ನ ಪ್ರಭಾವ ಬೀರುತ್ತಿದೆ. 

ಹೌದು, ದಕ್ಷಿಣ ಆಫ್ರಿಕಾದಲ್ಲಿ ಭಾರಿ ಪ್ರಮಾಣದ ಮಕ್ಕಳು ಒಮಿಕ್ರಾನ್‌ ವೈರಸ್‌ ದಾಳಿಗೆ ತುತ್ತಾಗುತ್ತಿದ್ದಾರೆ.

ಡೆಲ್ಟಾಗಿಂತ ಹೆಚ್ಚು ಅಪಾಯಕಾರಿ ಅಂತಾ ಕರೆಸಿಕೊಳ್ಳತಿರುವ ಈ ಒಮಿಕ್ರಾನ್‌ ವೈರಸ್ ಮೊದಲು ದಕ್ಷಿಣ ಆಫ್ರಿಕಾದಲ್ಲಿಯೇ‌ ಕಾಣಿಸಿಕೊಳ್ತು. ಹಾಗಾಗಿ ವೈರಸ್‌ ಒಡ್ಡಿಕೊಂಡವ್ರ ಸಂಖ್ಯೆಯೂ ಹೆಚ್ಚಾಗಿದೆ. ಆಘಾತಕಾರಿ ಅಂಶವೆಂದ್ರೆ, ಇಲ್ಲಿಯವರೆಗೆ ಮಕ್ಕಳ ತಂಟೆಗೆ ಹೋಗದ ವೈರಸ್‌ ಈಗ ಏಕಾಏಕಿ ಮಕ್ಕಳನ್ನ ಟಾರ್ಗೇಟ್‌ ಮಾಡಿದೆ ಅನ್ನೋದು ಗೊತ್ತಾಗ್ತಿದೆ. ಯಾಕಂದ್ರೆ, ಇಲ್ಲಿಯವರೆಗೆ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ತಗುಲಿರಲಿಲ್ಲ. ಆದ್ರೆ, ಈಗ ಶೇಕಡಾ 10ರಷ್ಟು ಮಕ್ಕಳಿಗೆ ವೈರಸ್‌ ಆಟ್ಯಾಕ್‌ ಆಗಿದೆ.

ಶಾಕಿಂಗ್‌ ಸುದ್ದಿಯೆಂದ್ರೆ, ಸಧ್ಯ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಪೈಕಿ ಶೇ.10ರಷ್ಟು ಮಕ್ಕಳಿದ್ದಾರೆ. ತಹ್ಸವನೆ, ಜೋಹಾನ್ಸ್‌ಬರ್ಗ್‌ನಲ್ಲಿ 1,511 ಕೊರೊನಾ ಕೇಸ್‌ ಪತ್ತೆಯಾಗಿದ್ರೆ, ಈ ಪೈಕಿ 113 ಸೋಂಕಿತರು 9 ವರ್ಷದ ಮಕ್ಕಳಾಗಿದ್ದಾರೆ ಅನ್ನೋದು ವಿಷಾದ. ಇನ್ನು ಸಧ್ಯ ಭಾರತದಲ್ಲಿ ವೈರಸ್‌ ಆರಂಭಿಕ ಹಂತದಲ್ಲಿದ್ದು, ಕಟ್ಟುನಿಟ್ಟಿನ ನಿಯಮ ಪಾಲನೆ ಮೂಲಕ ವೈರಸ್‌ ಮಟ್ಟ ಹಾಕೋದು ಅತಿಮುಖ್ಯವಾಗಿದೆ.

1 COMMENT

LEAVE A REPLY

Please enter your comment!
Please enter your name here