ಟ್ರಾವೆಲ್ ಕಾಮಿಡಿ-ಡ್ರಾಮಾ ಜಾನರ್‌ನ ಕನ್ನಡ ಸಿನಿಮಾ ‘ರತ್ನನ್ ಪ್ರಪಂಚ’ ಸಿನಿಮಾವು ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ.
ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿದ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ ಮತ್ತು ಜನಪ್ರಿಯ ನಟ ಡಾಲಿ ಧನಂಜಯ್ ಹಾಗೂ ರೆಬಾ ಮೋನಿಕಾ ಜಾನ್ ನಟಿಸಿದ್ದಾರೆ. ಈ ಚಿತ್ರವು ರತ್ನಾಕರ ಹಾಗೂ ಮಯೂರಿ ಕಥೆಯನ್ನು ಹೇಳುತ್ತದೆ.
ಹಲವು ಹೊಸ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸ್ಟ್ಯಾಂಡ್-ಅಪ್ ಕಾಮಿಡಿ, ಅಮೆಜಾನ್ ಒರಿಜಿನಲ್ ಸರಣಿ, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು ರಹಿತ ಸಂಗೀತ, ಭಾರತದ ಅತಿದೊಡ್ಡ ಉತ್ಪನ್ನಗಳ ಸಂಗ್ರಹ, ಉಚಿತ ವಿತರಣೆಯನ್ನು ಒದಗಿಸುವ ಅಮೆಜಾನ್ ಪ್ರೈಮ್, ನಂಬಲಾಗದ ಮೌಲ್ಯವನ್ನು ನೀಡುತ್ತದೆ. ಉನ್ನತ ಡೀಲ್‌ಗಳು, ಪ್ರೈಮ್ ರೀಡಿಂಗ್‌ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್‌ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್ ಸೇರಿದಂತೆ, ಎಲ್ಲವೂ ವಾರ್ಷಿಕ ₹999 ರಲ್ಲಿ ಲಭ್ಯವಿದೆ . ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಚಂದಾದಾರರಾಗಿ ಕೂಡ ‘ರತ್ನನ್ ಪ್ರಪಂಚ’ ಸಿನಿಮಾವನ್ನು ಗ್ರಾಹಕರು ವೀಕ್ಷಿಸಬಹುದು. ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯು ಒಬ್ಬರು, ಮೊಬೈಲ್ ಮೂಲಕ ಮಾತ್ರ ಬಳಸಬಹುದಾದ ಯೋಜನೆಯಾಗಿದ್ದು, ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿದೆ.
ಅಮೆಜಾನ್ ಪ್ರೈಮ್ ವಿಡಿಯೋ ಇಂದು ತನ್ನ ಮುಂಬರುವ ಒರಿಜಿನಲ್ ಕನ್ನಡ ಚಲನಚಿತ್ರ ‘ರತ್ನನ್ ಪ್ರಪಂಚದ’ದ ಮೊದಲ ಟೀಸರ್ ಅನ್ನು ಅನಾವರಣಗೊಳಿಸಿತು ಮತ್ತು ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿದೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ ಟ್ರಾವೆಲ್ ಕಾಮಿಡಿ-ಡ್ರಾಮಾ ‘ರತ್ನನ್ ಪ್ರಪಂಚ’ವನ್ನು ರೋಹಿತ್ ಪದಕಿ ನಿರ್ದೇಶಿಸಿದ್ದಾರೆ ಮತ್ತು ಇದು ಅಕ್ಟೋಬರ್ 22 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಧನಂಜಯ್ನಟಿಸಿದ್ದಾರೆ ಹಾಗೂ ಮುಖ್ಯ ಪಾತ್ರದಲ್ಲಿ ರೆಬಾ ಮೋನಿಕಾ ಜಾನ್, ಉಮಾಶ್ರೀ, ರವಿಶಂಕರ್, ಅನು ಪ್ರಭಾಕರ್, ಪ್ರಮೋದ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್ ಮತ್ತು ಶ್ರುತಿ ಕೃಷ್ಣ ಇದ್ದಾರೆ.