ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಖರ್ಗೆ ಅವರು, ನಾವೂ ದೇಶ ಭಕ್ತರೇ, ನಾವೂ ಪಾಕಿಸ್ತಾನದ ವಿರುದ್ಧ ಸಮರ ಸಾರಿದ್ದೇವೆ. ಕಾಂಗ್ರೆಸ್ ನವರೆಲ್ಲಾ ಪಾಕಿಸ್ತಾನದವರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ, ಧರ್ಮ ಹಾಗೂ ಪಾಕಿಸ್ತಾನದ ಹೆಸರಿನಲ್ಲಿ ವಿಷ ಬೀಜ ಬಿತ್ತಿ ಜರನ ಕಣ್ಣಿಗೆ ಮಂಕೂಬೂದಿ ಎರಚಿ ಮತ ಪಡೆಯುವುದನ್ನೇ ಕೆಲವರು ಕಾಯಕ ಮಾಡಿಕೊಂಡಿದ್ದಾರೆ. ಇವಿಎಂ ಮೇಲೆ ನನಗೆ ಅನುಮಾನವಿಲ್ಲ. ಆದರೆ, ದೇಶದ ಜನತೆ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.