ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪುತ್ರ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಅವರ ಬೆಂಬಲಿಗರು ಹಲ್ಲೆ ಯತ್ನ , ಜೀವ ಬೇದರಿಕೆ ಇದೆಯಂದು ದೂರು ದಾಖಲಾಗಿದೆ.
ತಮಗೆ ರಕ್ಷಣೆ ನೀಡುವಂತೆ ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ವಿಜಯಕುಮಾರ್ ಕವಡ್ಯಾಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಟಿಕೇಟ್ ಹಂಚಿಕೆ ವಿಚಾರದಲ್ಲಿ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಬೆಂಬಲಿಗರು ವಿಶೇಷಚೇತನರಾಗಿರುವ ತಮ್ಮ ಹಲ್ಲೆ ಯತ್ನ ನಡೆಸಿದ್ದಾರೆ.ಔರಾದ್ ಪಟ್ಟಣ ಪಂಚಾಯತಿ ಬಿ ಫಾರ್ಮ ಹಂಚಿಕೆ ವಿಚಾರದಲ್ಲಿ ‘ಬಾಯಿ ಮುಚ್ಚಕೊಂಡು ಸುಮ್ಮನಿರಬೇಕು. ಇಲ್ಲದಿದ್ದರೆ ಲಾಡ್ಜ್ ಮೇಲಿನಿಂದ ಎಸೆದು ಮುಗಿಸಿ ಬಿಡುತ್ತೇವೆ ” ಎಂದು ವಿಜಯಸಿಂಗ್ ಅವರು ತಮಗೆ ಅವಾಜ್ ಹಾಕಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಹಾಗೂ ವಿಶೇಷ ಚೇತನ ರಾಗಿರುವ ನನ್ನನ್ನು ಕ್ಷೇತ್ರದಲ್ಲಿ ಮುಗಿಸಿ ಬಿಡಲು ಬೆಂಬಲಿಗರನ್ನು ಎತ್ತಿ ಕಟ್ಟಿದ್ದಾರೆ ನನಗೆ ಜೀವ ಭಯ ಇದೆ. ಹೀಗಾಗಿ ತಮಗೆ ರಕ್ಷಣೆ ನೀಡುವಂತೆ ವಿಜಯ ಕುಮಾರ ಕವಡ್ಯಾಳ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.