ಧರ್ಮಸ್ಥಳ ಕೇಸ್ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?
ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್ಐಟಿ ರಚಿಸಿರುವುದು ಒಳ್ಳೆಯ ನಿರ್ಧಾರ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಮಾತನಾಡಿದ ಅವರು, “ಸರ್ಕಾರಕ್ಕೆ ನಾನು ಆಭಾರಿ. ಎಸ್ಐಟಿ ರಚಿಸಿದ ಕಾರಣ ಸತ್ಯ ಹೊರಬರುತ್ತಿದೆ.
ಕೋವಿಡ್ ಸಮಯದಲ್ಲಿ ಹಾಗೂ ಇತ್ತೀಚೆಗೆ ಅನೇಕ ಪುಸ್ತಕಗಳನ್ನು ಓದಿದ್ದೇನೆ. ಸಿದ್ದಗಂಗಾ ಶ್ರೀಗಳ ಹಲವು ಪುಸ್ತಕಗಳನ್ನು ಓದಿ ಪ್ರೇರಣೆಯಾಗಿತ್ತು. ನಮ್ಮ ಸೇವೆ ಧರ್ಮಕ್ಕೆ ಮಾತ್ರ ಸಮರ್ಪಿತವಾದುದು. ಸೇವೆ ಎಂದರೆ ಅದು ಪ್ರಚಾರದ ವಿಷಯವಲ್ಲ. ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ” ಎಂದು ಹೇಳಿದರು.
ಅವರು ಮುಂದುವರೆದು, “ಧರ್ಮಸ್ಥಳ ಒಂದು ಕಡೆ, ಆದರೆ ಧರ್ಮಸ್ಥಳದ ಊರಿನ ಜನರು ನಮ್ಮದೇ. ನಮ್ಮ ಮೇಲೆ ಅನೇಕ ಅಪವಾದ, ಹಗೆತನ, ದ್ವೇಷ ಎದ್ದು ಬಂದಿದೆ. ಇದರ ಕಾರಣ ನನಗೆ ತಿಳಿದಿಲ್ಲ. ಆದರೂ ನಮ್ಮ ಮೇಲೆ ನಂಬಿಕೆ ಇಟ್ಟಿರುವ ಲಕ್ಷಾಂತರ ಜನರಿಗೆ ನಾನು ಕೃತಜ್ಞ. ನಾವು ತಪ್ಪು ಮಾಡದ ಕಾರಣ ಆತ್ಮವಿಶ್ವಾಸ ನಮ್ಮೊಂದಿಗೆ ಇದೆ” ಎಂದರು.