ಐಪಿಎಲ್ 12ರ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ಗೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್ರೌಂಡರ್, ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ ಟೂರ್ನಿಯಿಂದ ಎರಡು ವಾರಗಳ ಕಾಲ ಹೊರಗುಳಿಯಲಿದ್ದಾರೆ.
ಗ್ರೇಡ್ 1 ಹಾರ್ಮ್ಸ್ಟ್ರಿಂಗ್ ನೋವಿನಿಂದ ಬ್ರಾವೊ ಬಳಲುತ್ತಿದ್ದಾರೆ. ಹೀಗಾಗಿ ಸಿಎಸ್ಕೆ ಆಡುವ ಮುಂದಿನ ಪಂದ್ಯಗಳಿಗೆ ಬ್ರಾವೊ ಅಲಭ್ಯರಾಗಲಿದ್ದಾರೆ ಎಂದು ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ತಿಳಿಸಿದ್ದಾರೆ. ಬ್ರಾವೊ ರೂಲ್ಡ್ ಔಟ್ ಆಗಿರೋದು ತಂಡಕ್ಕೆ ದೊಡ್ಡ ಲಾಸ್ ಆಗಿದೆ ಎಂದಿದ್ದಾರೆ.
ಅಬ್ಬರದ ಬ್ಯಾಟಿಂಗ್ ಮೂಲಕ ತಂಡದ ಸ್ಕೋರ್ ಹೆಚ್ಚುತ್ತಿದ್ದ ಬ್ರಾವೊ, ಡೆಥ್ ಓವರ್ಗಳಲ್ಲಿ ರನ್ನಿಯಂತ್ರಿಸುವುದರ ಜೊತೆಗೆ ಅಗತ್ಯವಿದ್ದಾಗ ವಿಕೆಟ್ ಪಡೆದು ಯಶಸ್ಸು ತಂದುಕೊಡುತ್ತಿದ್ರು.