ಸೌತ್ ಸಿನಿ ದುನಿಯಾದಲ್ಲಿ ತಲಾ ಎನ್ನುವ ಪದ ಯಾರಿಗೆ ಗೊತ್ತಿಲ್ಲಾ ಹೇಳಿ. ತಲಾ ಅಂತಾಕ್ಷಣ ಥಟ್ ಅಂತಾ ನೆನಾಪಾಗೋದೆ ತಮಿಳಿನ ಸೂಪರ್ ಸ್ಟಾರ್ ಅಜಿತ್. ಕಾರ್ ಮೆಕಾನಿಕ್ ಆಗಿದ್ದ ಅಜಿತ್, ಇಂದು ತಮಿಳು ಚಿತ್ರರಂಗದಲ್ಲಿ ಟಾಪ್ ಹೀರೋಗಳಲ್ಲಿ ಒಬ್ಬರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ಸೂಪರ್ ಸ್ಟಾರ್ ನಟ.
ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿರೋ ಅಜಿತ್ಗೆ,ಅಭಿಮಾನಿಗಳು ಪ್ರೀತಿಯಿಂದ ಕರೆಯೋ ಹೆಸರೇ ತಲಾ ಅಜಿತ್. ಸಿನಿಮಾ ಕ್ಷೇತ್ರದಲ್ಲಿ ತಲಾ ಅಂದ್ರೆ ಅಜಿತ್. ಆದ್ರೆ ಕ್ರಿಕೆಟ್ನಲ್ಲಿ ತಲಾ ಅಂದ್ರೆ ಅದು ಧೋನಿ. ಐಪಿಎಲ್ನಲ್ಲಿ ಸಿಎಸ್ಕೆ ಕ್ಯಾಪ್ಟನ್ ಆಗಿರೋ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ಗೆ ಫ್ಯಾನ್ಸ್ ತಲಾ ಎಂದು ಕರೆಯುತ್ತಾರೆ. ಚೆನ್ನೈ ಫ್ಯಾನ್ಸ್ ಮಾತ್ರ ಅಲ್ಲ, ಇಡೀ ಸೌತ್ ಇಂಡಿಯನ್ ಕ್ರಿಕೆಟ್ ಫ್ಯಾನ್ಸ್ ಎಲ್ಲಾ ಧೋನಿಯನ್ನ ಪ್ರೀತಿಯಿಂದ ತಲಾ ಎಂದು ಸಂಭೋದಿಸುತ್ತಾರೆ. ಧೋನಿಗೂ ಫ್ಯಾನ್ಸ್ ತಮ್ಮನ್ನ ತಲಾ ಎಂದು ಕರೆದ್ರೆ ಖುಷಿಯಾಗುತ್ತಂತೆ. ಇತ್ತಿಚೀಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಂತರ ವೀಕ್ಷಣೆ ವಿವರಣೆಕಾರ ಹರ್ಷ ಭೋಗ್ಲೆ, ಈ ಬಗ್ಗೆ ಧೋನಿ ಕೇಳಿದ್ರು.ಇದಕ್ಕೆ ಉತ್ತರಿಸಿದ ಧೋನಿ, ತಲಾ ಅಂತ ಕರೆದಾಗ ತುಂಬಾ ಸ್ಪೆಷಲ್ ಆಗಿ ಫೀಲ್ ಆಗುತ್ತೆ.ಈ ಹೆಸರು ಇಟ್ಟಿ ಸಿಎಸ್ಕೆ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳೋಕೆ ಇಷ್ಟ ಪಡ್ತೀನಿ ಅಂತಾ ಹೇಳಿದ್ರು.
ಧೋನಿಗೆ ಹೀಗೆಂದು ಕರೆದ್ರೆ ಸಿಕ್ಕಾಪಟ್ಟೆ ಖುಷಿ ಆಗುತ್ತಂತೆ..!
Date: