ಹಿರಿಯ ನಟ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ !?

Must read

ಹಿರಿಯ ರಂಗಭೂಮಿ ಕಲಾವಿದ, ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಆದ  ಮಾಸ್ಟರ್ ಹಿರಣ್ಣಯ್ಯ ಇಂದು ನಿಧನರಾಗಿದ್ದಾರೆ. ತುಂಬ ದಿನಗಳಿಂದ ಲಿವರ್​​ ಸಮಸ್ಯೆಯಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ, ಬೆಂಗಳೂರಿನ ಉತ್ತರಹಳ್ಳಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

85 ವರ್ಷದ ಹಿರಣ್ಣಯ್ಯ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕುಟುಂಬಸ್ಥರು 11.30ರ ವೇಳೆಗೆ ಹಿರಣ್ಣಯ್ಯ ಅವರ ಪಾರ್ಥೀವ ಶರೀರವನ್ನ ಬನಶಂಕರಿ ನಿವಾಸಕ್ಕೆ ತರಲಿದ್ದಾರೆ . ಚಿತ್ರರಂಗದಲ್ಲಿ ಕಲಾವಿದರೊಡನೆ ಆತ್ಮೀಯತೆಯಿಂದ ಇದ್ದ ಹಿರಣ್ಣಯ್ಯ  ಅವರ ನಿಧನ ಚಿತ್ರರಂಗದಲ್ಲಿ ಮೋಡ ಕವಿದಂತಾಗಿದೆ , ಹಿರಣ್ಣಯ್ಯ ಅವರ ಅಂತಿಮ ದರ್ಶನ ಪಡೆಯಲು ಹಲವಾರು ಚಿತ್ರರಂಗದ ಗಣ್ಯರು ಭೇಟಿ ನೀಡುವ ಸಾಧ್ಯತೆ .

- Advertisement -spot_img

More articles

- Advertisement -spot_img

Latest article