ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ ಟ್ವೀಟರ್ ನಲ್ಲಿ ಫೋಟೋ ಒಂದನ್ನು ಹಾಕಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಜೊತೆ ಪ್ರೀತಿ ಮಾತನಾಡ್ತಿರುವ ಫೋಟೋ ಇದಾಗಿದೆ. ಈ ಫೋಟೋ ಜೊತೆಗೆ ಪ್ರೀತಿ ಹಾಕಿರುವ ಶೀರ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ಕೂಲ್ ಕ್ಯಾಪ್ಟನ್ ಧೋನಿಗೆ ನನ್ನನ್ನು ಸೇರಿಸಿ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಆದ್ರೆ ನಾನೀಗ ಧೋನಿ ಮಗಳು ಜೀವಾಳ ದೊಡ್ಡ ಅಭಿಮಾನಿಯಾಗಿದ್ದೇನೆ. ಧೋನಿ ಎಚ್ಚರವಾಗಿರಿ. ನಾನು ಯಾವಾಗ ಬೇಕಾದ್ರೂ ನಿಮ್ಮ ಮಗಳನ್ನು ಅಪಹರಿಸಬಹುದು ಎಂದು ಪ್ರೀತಿ ಶೀರ್ಷಿಕೆ ಹಾಕಿದ್ದಾರೆ. ಇಷ್ಟೇ ಅಲ್ಲ, ಧೋನಿ ಜೊತೆಗಿರುವ ಫೋಟೋಕ್ಕೆ ಶೀರ್ಷಿಕೆ ಹಾಕುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಧೋನಿ ಮಗಳು ಜೀವಾ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್. ಜೀವಾ ವಿಡಿಯೋ ಹಾಗೂ ಫೋಟೋಗಳನ್ನು ಧೋನಿ ಹಾಗೂ ಪತ್ನಿ ಸಾಕ್ಷಿ ಆಗಾಗ ಹಾಕ್ತಿರುತ್ತಾರೆ.ಎರಡು ದಿನಗಳ ಹಿಂದೆ ಜೀವಾಳ ವಿಡಿಯೋ ವೈರಲ್ ಆಗಿತ್ತು. ಅದ್ರಲ್ಲಿ ಮತದಾನ ಮಾಡುವಂತೆ ಜೀವಾ ವಿನಂತಿ ಮಾಡಿದ್ದಳು.