ಹೌದು, ಹಾರ್ದಿಕ್ ಪಾಂಡ್ಯ ನಂತರ ಬ್ಯಾಟಿಂಗ್ ಗೆ ಆಗಮಿಸಿದ ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿ ಉತ್ತಮ ಆಟವಾಡಿದರು. ಆದರೆ ಪಂದ್ಯದ ಕೊನೆಯ ಓವರ್ ಗಳಲ್ಲಿ ಉತ್ತಮ ಆಟವಾಡದೇ ಟೆಸ್ಟ್ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಟೀಂ ಇಂಡಿಯಾ ಸೋಲಿನ ಕುರಿತಂತೆ ವೀಕ್ಷಕ ವಿವರಣೆದಾರ ಸಂಜಯ್ ಮಂಜ್ರೇಕರ್ ಅವರು ಟ್ವೀಟ್ ಮಾಡಿದ್ದು, ವಿಶ್ವಕಪ್ ನಲ್ಲಿ ಭಾರತದ ಗೆಲುವಿನ ಓಟಕ್ಕೆ ಕಡಿವಾಣ ಹಾಕುವ ತಂಡ ಇದ್ದರೆ, ಅದು ಕೇವಲ ಇಂಗ್ಲೆಂಡ್ ತಂಡವಾಗಿದೆ.ಧೋನಿ ಕೊನೆಯ ಓವರ್ ಗಳಲ್ಲಿ ನಿಧಾನಗತಿಯ ಆಟ ಪಂದ್ಯದ ಸೋಲಿಗೆ ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ