ಸ್ಯಾಂಡಲ್ ವುಡ್ ನ ಆಯಕ್ಷನ್ ಪ್ರಿನ್ಸ್ ಎಂಬ ಬಿರುದು ತೆಗೆದುಕೊಂಡಿರುವ ಧ್ರುವ ಸರ್ಜಾ ತಮ್ಮ ಗೆಳತಿ ಪ್ರೇರಣಾಳ ಕೈಹಿಡಿಯಲಿದ್ದಾರೆ.ಇದೀಗ ಭರ್ಜರಿ ಚಿತ್ರದ ಶೂಟಿಂಗ್ ಬ್ಯುಸಿಯಲ್ಲಿರುವ ಧ್ರುವ ಮದುವೆ ದಿನಾಂಕವನ್ನು ಹೇಳಿಲ್ಲ .
ಕಳೆದ ವರ್ಷದ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ನವೆಂಬರ್ 23 ಮತ್ತು 24 ಕ್ಕೆ ಹಸೆಮಣೆ ಏರಲಿದೆ. ಆದರೆ, ಮದುವೆಯನ್ನು ಮೈಸೂರಿನಲ್ಲಿ ನಡೆಸಬೇಕೋ ಅಥವಾ ಬೆಂಗಳೂರಿನಲ್ಲಿ ನಡೆಸಬೇಕೋ ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.