ಚಂದನವನದಲ್ಲಿ ಮತ್ತೊಬ್ಬ ಸ್ಟಾರ್ ನಟ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದು ಇದೇ ತಿಂಗಳು ಸಪ್ತಪದಿ ತುಳಿಯಲಿದ್ದಾರೆ. ಹೌದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮದುವೆ ಸಮೀಪಿಸುತ್ತಿತ್ತು ಧ್ರುವ ಸರ್ಜಾ ಅವರು ಮದುವೆ ಆಮಂತ್ರಣ ನೀಡುವ ಕೆಲಸವನ್ನು ಈಗಾಗಲೇ ಆರಂಭಿಸಿದ್ದು ಕೆಲ ಸ್ಟಾರುಗಳಿಗೆ ಈಗಾಗಲೇ ಆಮಂತ್ರಣವನ್ನು ನೀಡಿದ್ದಾರೆ. ಅಂದಹಾಗೆ ಧೃವ ಸರ್ಜಾ ಅವರ ಮದುವೆ ಆಮಂತ್ರಣ ಎಲ್ಲರ ಗಮನವನ್ನು ಸೆಳೆದಿದ್ದು ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದೆ. ಧ್ರುವ ಸರ್ಜಾ ಅವರು ಆಂಜನೇಯನ ಭಕ್ತ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಹೀಗಾಗಿ ಮದುವೆ ಆಮಂತ್ರಣದಲ್ಲಿ ಮೊದಲಿಗೆ ಆಂಜನೇಯನ ದರ್ಶನವೇ ಆಗಲಿದೆ.
ತದನಂತರ ಹಿಂದೂ ಧರ್ಮದ ಸಂಪ್ರದಾಯದಂತೆ ಅರಿಶಿನದ ಕೊಂಬು ಶ್ರೀಗಂಧ ಇನ್ನಿತರ ವಸ್ತುಗಳು ಇದರಲ್ಲಿದೆ. ಹಾಗೂ ಧ್ರುವ ಸರ್ಜಾ ಮತ್ತು ಪ್ರೇರಣಾ ಅವರ ಫೋಟೋವನ್ನು ಹಾಕಲಾಗಿದ್ದು ಮದುವೆ ನಡೆಯುವ ಸಮಯ ಮತ್ತು ಸ್ಥಳವನ್ನು ನಮೂದಿಸಲಾಗಿದೆ. ಇನ್ನು ಇಷ್ಟೆಲ್ಲ ವಿಜೃಂಭಣೆಯಿಂದ ಕೂಡಿರುವ ಇನ್ವಿಟೇಶನ್ ಕಾರ್ಡ್ ನ ಬೆಲೆ ಎಷ್ಟು ಎಂದು ಕೇಳಿದರೆ ನಿಜಕ್ಕೂ ಶಾಕ್ ಆಗದೇ ಇರಲಾಗದು. ಹೌದು ಧ್ರುವ ಸರ್ಜಾ ಅವರು ನೀಡುತ್ತಿರುವ ಆ ಒಂದು ಕಾರ್ಡಿನ ಬೆಲೆ ಬರೋಬ್ಬರಿ ಹದಿನೈದು ಸಾವಿರ ಎಂಬ ಸುದ್ದಿ ಇದೆ. ಸೆಲೆಬ್ರಿಟಿಗಳ ಮದುವೆ ಎಂದ ಮೇಲೆ ಕಾಸ್ಟ್ಲಿ ಇನ್ವಿಟೇಷನ್ ನೀಡುವುದು ಕಾಮನ್ ಬಿಡಿ..