ಹಾಸ್ಯ ನಟ ಕೋಮಲ್ ಕುಮಾರ್ ಮೇಲೆ ಹಲ್ಲೆ ನಡೆದಿದೆ ಶಾಲೆಯಿಂದ ತಮ್ಮ ಮಗುವನ್ನು ಕರೆದುಕೊಂಡು ಬರಲು ಹೋಗಿದ್ದ ಕೋಮಲ್ ಅವರಿಗೆ ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಬಳಿ ನಾಲ್ಕು ಜನ ಅಪರಿಚಿತರು ಹಲ್ಲೆ ಮಾಡಿದ್ದಾರೆ ಅವರು ಮದ್ಯ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ ,
ಕೋಮಲ್ ಅವರ ಮೂಗು ಮತ್ತು ಬಾಯಿಗೆ ಸ್ವಲ್ಪ ಏಟಾಗಿದ್ದು ಈ ವಿಷಯ ತಿಳಿಸಿದ್ದಂತೆ ಜಗ್ಗೇಶ್ ಅವರು ಕೋಮಲ್ ಅವರೊಡನೆ ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ . ಆ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್ ಅವರು ದುಷ್ಕರ್ಮಿಗಳು ಕುಡಿದು ಬಂದು ಕೋಮಲ್ ಮೇಲೆ ಹಲ್ಲೆ ಮಾಡಿದ್ದಾರೆ ಈ ರೀತಿಯ ವಿನಾಕಾರಣ ಜಗಳ ಮಾಡುವವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು .