ನಟ ದರ್ಶನ್ ಅವರ ಫಾರ್ಮ್‌ಹೌಸ್‌ನಲ್ಲಿ ಅತ್ಯಾಚಾರ!

Date:

ಕನ್ನಡ ಚಲನಚಿತ್ರರಂಗದ ನಟ ದರ್ಶನ್ ಅವರು ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿ ಫಾರ್ಮ್ ಹೌಸ್ ಒಂದನ್ನು ಹೊಂದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ದರ್ಶನ್ ಚಿತ್ರೀಕರಣದಿಂದ ಬಿಡುವು ಪಡೆದ ಆ ಸಮಯದಲ್ಲಿ ಟೀ ನರಸೀಪುರ ರಸ್ತೆಯಲ್ಲಿರುವ ಈ ಫಾರ್ಮ್ ಹೌಸ್ ಗೆ ಹೋಗಿ ಅಲ್ಲಿ ತಾವು ಸಾಕಿರುವ ಪ್ರಾಣಿಗಳ ಜೊತೆ ಕಾಲವನ್ನು ಕಳೆದು ಪರಿಸರದಲ್ಲಿ ಕಳೆದು ಹೋಗಿಬಿಡುತ್ತಾರೆ. ಹೀಗೆ ವಾರಗಳಗಟ್ಟಲೆ ದರ್ಶನ್ ತಮ್ಮ ಈ ವಿನೀಶ್ ದರ್ಶನ್ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆದದ್ದು ಕೂಡ ಉಂಟು.

ಇದೀಗ ಇದೇ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ವ್ಯಕ್ತಿಯೋರ್ವರು ಮಗಳ ಮೇಲೆ ಅದೇ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿರುವ ನೀಚ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

 

ಹೌದು ಶಿವಮೊಗ್ಗ ಮೂಲದ ದಂಪತಿಗಳಿಬ್ಬರು ತಮ್ಮ 10 ವರ್ಷದ ಮಗಳು ಮತ್ತು 8 ವರ್ಷದ ಮಗನ ಜೊತೆ ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಕೂಲಿ ಕೆಲಸಕ್ಕೆಂದು ವಲಸೆ ಬಂದಿದ್ದರು. ಮಗನನ್ನು ಶಾಲೆಗೆ ಸೇರಿಸಿದ್ದರು ಆದರೆ ಮಗಳ ವರ್ಗಾವಣೆ ಪತ್ರದ ಸಮಸ್ಯೆ ಇದ್ದ ಕಾರಣ ಆಕೆಯನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಹೀಗೆ ಇದೇ ರೀತಿ ಬಿಹಾರ ಮೂಲದಿಂದ ನಜೀಮ್ ಎಂಬ ಯುವಕ ಕುದುರೆ ಲಾಳ ಹೊಡೆಯುವ ಕೆಲಸಕ್ಕೆ ಬಂದು ಸೇರಿದ್ದ.

 

ಕುದುರೆ ಲಾಳ ಹೊಡೆಯುವ ಕೆಲಸ ಮಾಡುತ್ತಿದ್ದ ಈ ನಜೀಮ್ ಆ ಹತ್ತು ವರ್ಷದ ಪುಟ್ಟ ಬಾಲಕಿಯನ್ನು ಸುಮಾರು 2 – 3 ದಿನಗಳ ಕಾಲ ತನ್ನ ಕೋಣೆ ಮತ್ತು ಮೆಷಿನ್ ಮನೆಗೆ ಕರೆದುಕೊಂಡು ಹೋಗಿ ಅಸಹ್ಯವಾಗಿ ವರ್ತಿಸಿದ್ದಾನೆ, ಅಷ್ಟೇ ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ ಎಂದು ಬೆದರಿಕೆಯನ್ನು ಕೂಡ ಹಾಕಿದ್ದಾನೆ. ಹೀಗೆ ಆ ಯುವಕನ ಮಾತಿಗೆ ಹೆದರಿದ ಪುಟ್ಟ ಬಾಲಕಿ ಆಕೆಯ ಅಮ್ಮನ ಬಳಿ ಬಂದು ನಡೆದ ಘಟನೆಯನ್ನೆಲ್ಲ ವಿವರಿಸಿದ ನನಗೆ ಇಲ್ಲಿ ಇರಲು ಭಯವಾಗುತ್ತಿದೆ ನಮ್ಮ ಊರಿಗೆ ವಾಪಸ್ ಹೊರಟು ಹೋಗೋಣ ಎಂದು ಒಂದೇ ಸಮನೆ ಅಳಲು ಆರಂಭಿಸಿದಳು.

ಈ ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ಆ ತಾಯಿ ಫಾಮ್ ಹೌಸ್ ಮ್ಯಾನೇಜರ್ ಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಾಳೆ. ಈ ವಿಷಯ ತಿಳಿದ ಕೂಡಲೇ ಮ್ಯಾನೇಜರ್ ಫಾರ್ಮ್ ಹೌಸ್ ಗೆ ಬಂದು ಆಕೆಯ ತಾಯಿಯಿಂದ ಪೊಲೀಸ್ ದೂರನ್ನು ದಾಖಲಿಸಿದ್ದಾರೆ. ಬಾಲಕಿಯ ತಾಯಿ ಕೊಟ್ಟ ದೂರಿನ ಮೇರೆಗೆ ಈಗಾಗಲೇ ಆ ಯುವಕನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

 

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...